ಬಂಟ್ವಾಳ: ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಮಾಧ್ಯಮಕ್ಕೆ ಸಿಕ್ಕಿದ ಮಾಹಿತಿಯಂತೆ ನಾಲ್ಕು ಸಾರ್ವಜನಿಕ ಶೌಚಾಯಲಕ್ಕೆ ಸಣ್ಣ ಪುಟ್ಟ ನೆಪವೊಡ್ಡಿ ಬಾಗಿಲು ಹಾಕಲಾಗಿದೆ. ಬದಲಿ ವ್ಯವಸ್ಥೆ ಇಲ್ಲವಾಗಿದೆ. ಬಯಲು ಶೌಚಾಲಯವೇ ಇವರಿಗೆ ಖುಷಿ ಕೊಟ್ಟಿದೆಯೆವೋ ಗೊತ್ತಿಲ್ಲ, ಅಥವಾ ರಾಜಕೀಯಕ್ಕೆ ಶೌಚಾಲಯ ಕೂಡಾ ವಸ್ತುವಾಯಿತೂ ದೇವರೇ ಬಲ್ಲ…. ಅಂತೂ ಮುರಿದ ಸ್ಥಿತಿಯಲ್ಲಿರುವ ಬಾಗಿಲು, ಒಳಗೆ ಅಲ್ಲಲ್ಲಿ ಕಸ, ಗಲೀಜು, ಶರಬು ಬಾಟಲಿಗಳ ರಾಶಿ, ಸುತ್ತಮುತ್ತ ಆಳೆತ್ತರದ ಗಾತ್ರಕ್ಕೆ ಬೆಳೆದು ನಿಂತಿರುವ ಗಿಡಗಂಟಿಗಳು….
ಇದು ಬಂಟ್ವಾಳ ಪೇಟೆಯ ಹೃದಯ ಭಾಗದ ಭಾಮಿ ಜಂಕ್ಷನ್ನಲ್ಲಿ ಪುರಸಭೆ ನಿಮರ್ಿಸಿದ ಸಾರ್ವಜನಿಕ ಶೌಚಾಲಯದ ಸಮಗ್ರ ನೋಟ. ನಿರ್ವಹಣೆಯ ಕೊರತೆಯಿಂದ ಸುಸಜ್ಜಿತ ಶೌಚಾಲಯ ಪಾಳು ಬಿದ್ದ ಸ್ಥಿತಿಗೆ ತಲುಪಿದೆ. ಲಕ್ಷಾಂತರ ರುಪಾಯಿ ವ್ಯಯಿಸಿದ ಟಾಯ್ಲೆಟ್ ನಿಷ್ರಯೋಜಕವಾಗುತ್ತಿದೆ.

ಸಾರ್ವಜನಿಕ ಅನುಕೂಲದ ದೃಷ್ಟಿಯಿಂದ ಬಂಟ್ವಾಳ ಪುರಸಭೆ 10ನೇ ಹಣಕಾಸು ಅನುದಾನದಲ್ಲಿ ಬಾಮಿ ಜಂಕ್ಷನ್ ಬಳಿ ಸಾರ್ವಜನಿಕ ಶೌಚಾಲಯವನ್ನು ನಿಮರ್ಿಸಿ ಕೊಟ್ಟಿದೆ. ಮಲ ಹಾಗೂ ಮೂತ್ರ ವಿಸರ್ಜನೆಗೆ ಪ್ರತ್ಯೇಕ ಕೊಠಡಿ, ನೀರಿನ ವ್ಯವಸ್ಥೆಯನ್ನು ಕಲ್ಪಿಸಕೊಡಲಾಗಿದೆ. ಆದರೆ ಇಲ್ಲೊಂದು ಶೌಚಾಲಯ ಇದೆ ಎನ್ನುವುದನ್ನು ಸ್ವತಃ ಪುರಸಭೆಯೇ ಮರೆತು ಬಿಟ್ಟಿರುವುದರಿಂದ ಶೌಚಾಲಯಕ್ಕೆ ಈ ಸ್ಥಿತಿ ಒದಗಿ ಬಂದಿದೆ. ಶೌಚಾಲಯದ ಒಳಗೆ ಅಶುಚಿತ್ವ ತಾಂಡವವಾಡುತ್ತಿದೆ. ಹೊರ ಭಾಗದಲ್ಲಿ ಪೊದೆಗಳು ಬೆಳೆದು ನಿಂತು ವಿಷಜಂತುಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಅಲ್ಲದೆ ಶೌಚಾಲಯದ ಬಳಿಯೇ ತ್ಯಾಜ್ಯ ತೊಟ್ಟಿಯನ್ನು ನಿಮರ್ಿಸಿರುವುದರಿಂದ ಅದರ ಕೊಳಚೆಯೂ ಶೌಚಾಲಯವನ್ನು ವ್ಯಾಪಿಸಿಕೊಂಡಿದೆ. ತ್ಯಾಜ್ಯ ತೊಟ್ಟಿ ದುವರ್ಾಸನೆಯೂ ಶೌಚಾಲಯದತ್ತ ಜನ ಬಾರದಂತೆ ಮಾಡಿದೆ. ಇದರಿಂದಾಗಿ ಯಾರು ಈ ಶೌಚಾಲಯವನ್ನು ಬಳಸ ಸ್ಥಿತಿ ನಿಮರ್ಾಣವಾಗಿ ವ್ಯರ್ಥವಾಗುತ್ತಿದೆ. ಹೊಸ ಶೌಚಾಲಯ ನಿಮರ್ಿಸಲು ಲಕ್ಷಾಂತರ ರುಪಾಯಿ ವ್ಯಯಿಸುವ ಪುರಸಭೆ ಇರುವ ಶೌಚಾಲಯವನ್ನು ನಿರ್ವಹಣೆ ಮಾಡಲು ನಿರ್ಲಕ್ಷ ತೋರುತ್ತಿರುವ ಬಗ್ಗೆ ಸ್ಥಳೀಯರಿಂದ ಆಕ್ರೋಶವೂ ವ್ಯಕ್ತವಾಗಿದೆ.
ನೀರಿನ ದುರ್ಬಳಕೆ:
ಶೌಚಾಲಯ ಉಪಯೋಗ ಶೂನ್ಯವಾಗಿರುವುದರಿಂದ ಇಲ್ಲಿನ ನೀರಿನ ಸಂಪರ್ಕವನ್ನು ಸ್ಥಳೀಯ ಬಾಡಿಗೆದಾರರು ಅಕ್ರಮವಾಗಿ ಬಳಸಿ ಕೊಳ್ಳುತ್ತಿದ್ದಾರೆ. ನಳ್ಳಿಗೆ ಪೈಪ್ ಸಿಕ್ಕಿಸಿ ಮನೆಗೆ ಸಂಪರ್ಕ ನೀಡಿದ್ದಾರೆ. ಇಲ್ಲಿಗೆ ಪುರಸಭೆಯ ಯಾವುದೇ ಅಧಿಕಾರಿ ಭೇಟಿ ನೀಡದ ಹಿನ್ನಲೆಯಲ್ಲಿ ಈ ರೀತಿ ನೀರು ದುರ್ಬಳಕೆಯಾಗುತ್ತಿದೆ.
ಇಲ್ಲಿ ಸಾರ್ವಜನಿಕ ಶೌಚಾಲಯ ಇದೇ ಎನ್ನುವುದೇ ಈಗಿನ ಪುರಸಭೆ ಆಡಳಿತಕ್ಕೆ ಗೊತ್ತಿಲ್ಲ. ಶೌಚಾಲಯವನ್ನು ಉಪಯೋಗ ಪಡಿಸಿಕೊಳ್ಳುವ ವ್ಯವಸ್ಥೆಯನ್ನು ಪುರಸಭೆ ಆಡಳಿತ ಜನರಿಗೆ ಕಲ್ಪಿಸಿ ಕೊಟ್ಟಿಲ್ಲ. ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಮೂಲಭೂತ ಸಮಸ್ಯೆಗಳ ಬಗೆಹರಿಸಲು ಪ್ರಯತ್ನಿಸ ಬೇಕು ಎಂದು ವಾಡರ್್ ಸದಸ್ಯ ಬಿ ದೇವದಾಸ್ ಶೆಟ್ಟಿ ಹೇಳಿದ್ದಾರೆ

