ಮೂಡುಬಿದರೆ: ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಆಶ್ರಯದಲ್ಲಿ ತೋಡಾರು ಜಂಕ್ಷನ್ನಲ್ಲಿ ಸ್ವಚ್ಛ ಮಿಜಾರು ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಯುವಜನ ಸೇವಾ ಸಚಿವ ಕೆ.ಅಭಯಚಂದ್ರ ಜೈನ್ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯಿಂದ ಸ್ವಚ್ಛ ಭಾರತದ ಕನಸು ನನಸಾಗುತ್ತದೆ ಎಂದರು
ದ.ಕ ಜಿಲ್ಲಾ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ತುಳುಸಿ ಮದ್ದಿನೇನಿ ಮಾತನಾಡಿ, ಭಾರತದಲ್ಲಿನ ಪ್ರವಾಸಿ ತಾಣಗಳು ಮತ್ತಷ್ಟು ಆಕರ್ಷಣೆಯ ಎನಿಸಿಕೊಳ್ಳಬೇಕಾದರೆ ಸ್ವಚ್ಛತೆಗೆ ಗಮನಹರಿಸಬೇಕೆಂದರು.

mdb (1).

mdb (2)

mdb (3)

mdb (4)

mdb (5)

mdb (6)

mdb (7)
ಆಳ್ವಾಸ್ ಸಂಸ್ಥೆ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಮೈಟ್ ಕಾಲೇಜು ಅಧ್ಯಕ್ಷ ರಾಜೇಶ್ ಚೌಟ ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನಪರಿಷತ್ ಸದಸ್ಯ ಗಣೇಶ್ ಕಾಣರ್ಿಕ್, ಎನ್ಸಿಸಿ ಅಧಿಕಾರಿ ಕ್ಯಾ.ಶಿವರಾಮ್, ತೆಂಕಮಿಜಾರು ಪಿಡಿಒ ಸಾಯೀಶ್ ಚೌಟ, ಅಧ್ಯಕ್ಷೆ ಉಮಾವತಿ, ಉಪಾಧ್ಯಕ್ಷೆ ಮುತ್ತು, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪೀಟರ್ ಫೆನರ್ಾಂಡಿಸ್ ಉಪಸ್ಥಿತರಿದ್ದರು.

ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಆಂದೋಲನದಲ್ಲಿ ಡಾ.ಎಂ.ವಿ.ಶೆಟ್ಟಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮೈಟ್ ಕಾಲೇಜಿನ ವಿದ್ಯಾಥರ್ಿಗಳು ಹಾಗೂ ಗ್ರಾಮಸ್ಥರು ಸೇರಿ 3 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡರು. ಮಿಜಾರು, ತೋಡಾರು ಪರಿಸರದ 9 ಕಡೆಗಳಲ್ಲಿ 9 ಗುಂಪುಗಳು ಸ್ವಚ್ಛತೆಯನ್ನು ಮಾಡಿದವು
ಮಿಜಾರಿನ ನಾಗರಿಕರು, ಸ್ವಯಂಸೇವಾ ಸಂಘ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಗುಂಪುಗಳು, ಸ್ಥಳೀಯ ವಿದ್ಯಾಸಂಸ್ಥೆಗಳು ಹಾಗೂ ಮಿಜಾರು, ಗ್ರಾಮ ಪಂಚಾಯತಿಯ ಸಹ ಭಾಗಿತ್ವದಲ್ಲಿ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *