ಬಂಟ್ವಾಳ: ಎಸ್ ವಿಎಸ್ ಪದವಿ ಕಾಲೇಜಿನ ವಿದ್ಯಾಥರ್ಿನಿ ಸಹನಾ ಎಂ. ಶೆಟ್ಟಿ ಇವರಿಗೆ ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಗ್ಲೋಬಲ್ ಆರ್ಯಭಟ ಅವಾಡ್ರ್ ಪ್ರಶಸ್ತಿ ಸ್ವೀಕರಿಸಿದರು.
ಇಲ್ಲಿನ ಎಸ್.ವಿ.ಎಸ್. ಪದವಿ ಕಾಲೇಜಿನ ವಿದ್ಯಾಥರ್ಿನಿ, ಭರತನಾಟ್ಯ ಕಲಾವಿದೆ ಸಹನಾ ಎಂ.ಶೆಟ್ಟಿ ಇವರಿಗೆ ಏಷ್ಯಾ ವೇದಿಕ್ ಕಲ್ಚರ್ ಫೌಂಡೇಶನ್ ಮತ್ತು ಏಷ್ಯಾ ವೇದಿಕ್ ಕಲ್ಚರ್ ರಿಸಚ್ರ್ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಸಾಧನೆಗಾಗಿ ‘ಗ್ಲೋಬಲ್ ಆರ್ಯಭಟ ಇಂಟರ್ ನ್ಯಾಶನಲ್ ಅವಾಡ್ರ್ ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಗ್ಲೋಬಲ್ ಆರ್ಯಭಟ ಅವಾಡ್ರ್ ಪ್ರಶಸ್ತಿ ಸ್ವೀಕರಿಸಿದರು. ಭರತನಾಟ್ಯ ವಿದ್ವತ್ ಮತ್ತು ಕರಾಟೆ ಬ್ಲ್ಯಾಕ್ ಬೆಲ್ಟ್ ಹೊಂದಿರುವ ಈಕೆ ಹರ್ಯಾಣದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು. ಕರಾಟೆ ಕುಮಿಟೆ ವಿಭಾಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಐದು ಬಾರಿ ಚಿನ್ನದ ಪದಕ ಇವರಿಗೆ ಒಲಿದು ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.
