ಕೈಕಂಬ : ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯಡಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕಳೆದ ಆರು ದಿನದಿಂದ ‘ವಾರ್ಷಿಕ ವಿಶೇಷ ಶಿಬಿರ-೨೦೨೧-೨೨’ ಮುಂದುವರಿಸಿದ್ದು, ಆ ಪ್ರಯುಕ್ತ ಮಾ.೧೬ರಂದು ಬುಧವಾರ ಪಡುಪೆರಾರ ಮತ್ತು ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಮಾ. ೧೭ರಂದು ಸುಂಕದಕಟ್ಟೆ ಕಾಲೇಜಿನಲ್ಲಿ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.
ಪಡುಪೆರಾರ ಪಂಚಾಯತ್ನ ಅಧ್ಯಕ್ಷೆ ಅಮಿತಾ ಎಂ ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪ ಮೂಲ್ಯರ ಸಹಕಾರದಲ್ಲಿ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಮಾ. ೧೬ರಂದು ಬುಧವಾರ ಬೆಳಿಗ್ಗೆ ಬಜ್ಪೆ-ಗುರುಪುರ ಕೈಕಂಬ ರಾಜ್ಯ ಹೆದ್ದಾರಿಯ ಸುಂಕದಕಟ್ಟೆ, ಕತ್ತಲ್ಸಾರ್, ಪಡೀಲ್, ಪಡುಪೆರಾರ, ಕೊಳಂಬೆ, ಕೈಕಂಬದಲ್ಲಿ ರಸ್ತೆ ಬದಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಪಡುಪೆರಾರ ಪಂಚಾಯತ್ ಪಿಡಿಒ ಉಗ್ಗಪ್ಪ ಮೂಲ್ಯ, ಸದಸ್ಯ ಅರುಣ್ ಕೋಟ್ಯಾನ್, ಸಿಬ್ಬಂದಿ ಭರತ್, ಕಾಲೇಜು ಪ್ರಾಂಶುಪಾಲೆ ಡಾ. ಲತಾ ಕೋಟ್ಯಾನ್, ಉಪನ್ಯಾಸಕರಾದ ಕಮಲಾಕ್ಷಿ, ಶಾಲಿನಿ, ಗಣೇಶ್, ಜಯಶ್ರೀ, ಗ್ರಂಥಪಾಲಕ ವಿಶ್ವನಾಥ ರೆಂಜಾಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಡುಪೆರಾರ ‘ಶ್ರೀ ನಾಗಬ್ರಹ್ಮ ಯುವಕ ಮಂಡಲ(ರಿ) ಇದರ ಅಧ್ಯಕ್ಷ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.
