ಬಂಟ್ವಾಳ: ತಾಲ್ಲೂಕಿನ ಮಧ್ವ ಶಿವಾಜಿ ಮಾತೃ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲೆ ಸುಚಿತ್ರ ಶೆಟ್ಟಿ ಮಾತನಾಡಿದರು. 
ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾಯ್ದೆ ಜೊತೆಗೆ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿಕೊಂಡಾಗ ಸಮಾಜ ಸುಶಿಕ್ಷಿತ ಮತ್ತು ಸುರಕ್ಷತೆಯಿಂದ ಕೂಡಿರುತ್ತದೆ ಎಂದು ವಕೀಲೆ ಸುಚಿತ್ರ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಮಧ್ವ ಶಿವಾಜಿ ಮಾತೃ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾಯ್ದೆ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಮಾಸಜಿ ಸದಸ್ಯೆ ಧನಲಕ್ಷ್ಮಿ ಸಿ.ಬಂಗೇರ, ಶಿಕ್ಷಕಿ ಕಿಶೋರಿ, ಶಿವಾಜಿ ಮಾತೃ ಬಳಗ ಅಧ್ಯಕ್ಷೆ ಪ್ರಮೀಳಾ, ಗೌರವ ಸಲಹೆಗಾರ ನಳಿನಿ, ಪ್ರಧಾನ ಕಾರ್ಯದರ್ಶಿ ತುಳಸಿ, ಚಂದ್ರಶೇಖರ ಕರ್ಣ, ರಾಜ ಪ್ರಸಾದ್ ಅರಿಗ, ಶಿವಾಜಿ ಬಳಗ ಗೌರವಾಧ್ಯಕ್ಷ ಪ್ರಕಾಶ್ ಮಧ್ವ, ರೇಣುಕಾ, ತುಳಸಿ, ನಳಿನಿ ಮತ್ತಿತರರು ಇದ್ದರು.
