ಕೈಕಂಬ: ಹಿಂದುತ್ವವೆಂದರೆ ಮನುಷ್ಯತ್ವ. ಹಿಂದುತ್ವ ಎಂದ ತಕ್ಷಣ ಮುಸ್ಲಿಂ, ಕ್ರೈಸ್ತರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಆದರೆ ಹಿಂದುತ್ವ ಎಂದರೆ ಮನುಷ್ಯತ್ವವೇ ಹೊರತು ವೈರತ್ವ ಅಲ್ಲ,ಯಾವುದೇ ಜಾತಿ ಧರ್ಮ ಭೇಧ ವಿಲ್ಲದ ಜಾತ್ಯಾತೀತತೆಯೇ ಹಿಂದುತ್ವ, ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸಮಾಜದಲ್ಲಿ ಯುವಕರಿಗೆ ನಾಯಕತ್ವ ನೀಡುವ ಮೂಲಕ ಸಮಾಜವನ್ನು ಸಮರ್ಥವಾಗಿ ಮುನ್ನಡೆಸಲು ಅವಕಾಶ ನೀಡಬೇಕು ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. ಅವರು ಭಾನುವಾರ ಕುಲವೂರು ಗ್ರಾಮದ ತೆರೆಜಾಲು ದೊಂಪದಬಲಿ ಉತ್ಸವದ ಸಂಧರ್ಭದಲ್ಲಿ ನಡೆದ ದೂಮಾವತಿ ಕನ್ನಲ್ಲಾಯ ಯೂತ್ ಕ್ಲಬ್ ಕುಲವೂರು ಇದರ ದಶ ಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಯೂತ್ ಕ್ಲಬ್ ನ್ನು ಅಭಿನಂದಿಸಿ ಮಾತನಾಡಿದರು.

ಅನಾರೋಗ್ಯದಿಂದ ಬಳಳುತ್ತಿರುವ ರಜಾಕ್ ಕುಲವೂರು, ಹಂಗು ಬೊಳಿಯ, ರಮೇಶ್ ಬೊಳಿಯ ಮತ್ತು ದಿವಂಗತ ರಾಮ ಪೂಜಾರಿ ಅವರುಗಳ ಕುಟುಂಬಗಳಿಗೆ ಕ್ಲಬ್ ವತಿಯಿಂದ ನೀಡಲಾದ ಧನಸಹಾಯವನ್ನು ಶಾಸಕರು ಇದೇ ವೇಳೆ ವಿತರಿಸಿದರು ಹಾಗೂ ಇಲ್ಲಿನ ದೈವಗಳ ಚಾಕರಿ ನಿರ್ವಹಿಸಿದ್ದ ಹಿರಿಯರುಗಳಾದ ಸತೀಶ್ ಪಂಬದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗೇಶ್ ಶೇರಿಗಾರ್, ಧರ್ನಪ್ಪ ನಾಯ್ಕ್, ವಾಮನ ಭಂಡಾರಿ, ಶೀನ ಪೂಜಾರಿ ಹಾಗೂ ದೊಂಪದಬಲಿ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ಕುಲವೂರು ಗುತ್ತು ಇವರುಗಳನ್ನು ವೇದಿಕೆಯಲ್ಲಿ ಶಾಲು ಹೊದೆಸಿ, ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಯೂತ್ ಕ್ಲಬ್ ನ ಸೇವಾ ಚಟುವಟಿಗಳಿಗೆ ಸಹಕಾರ ನೀಡಿದ ಮಹನೀಯರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಅಸ್ರಣ್ಣ ಕುಪ್ಪೆಪದವು, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ ಮತ್ತು ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ ಗುಂಡ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು, ಸನ್ಮಾನಿತರ ಪರವಾಗಿ ನಾಗೇಶ್ ಶೇರಿಗಾರ್ ಮಾತನಾಡಿದರು. ಧಾರ್ಮಿಕ, ಸಾಮಾಜಿಕ ಮುಖಂಡ ಚಂದ್ರಹಾಸ್ ಶೆಟ್ಟಿ ನಾರಳ, ಯೂತ್ ಕ್ಲಬ್ ಅಧ್ಯಕ್ಷ ಸಂತೋಷ್ ಆಳ್ವ ಕಂಗಿನಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಜೇತ್ ಬೆಟ್ಟ0ಪಾಡಿ ನಿರೂಪಿಸಿ, ಸ್ವಾಗತಿಸಿದರು. ನಂತರ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಮಂಗಳೂರು ಇವರಿಂದ ಲೇಲೆ ಪಾಡಡೆ ಎಂಬ ತುಳು ನಾಟಕ ಪ್ರದರ್ಶನ ಜರಗಿತು.

