ಬಂಟ್ವಾಳ: ಹದಿಹರೆಯದಲ್ಲಿಯೆ ಅಪ್ರತಿಮ ಯೋಧರಾಗಿ ಮಾತೃಭೂಮಿಗಾಗಿ ಪರಾಕ್ರಮದಿಂದ ಹೋರಾಡಿದ ಶಿವಾಜಿ ಇಂದಿನ ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.WhatsApp Image 2022-02-19 at 4.21.22 PM

ಶತ್ರು ಸೈನ್ಯವನ್ನು ಎದುರಿಸಿದ ಶಿವಾಜಿಯ ಧೈರ್ಯ ಸಾಹಸ ಮತ್ತು ನಾಯಕತ್ವದ ಗುಣ ಅನುಕರಣೀಯ ಎಂದು ಬಂಟ್ವಾಳ ಗ್ರೇಡ್ 2 ತಹಶೀಲ್ದಾರ್ ಕವಿತಾ ಅವರು ಬಂಟ್ವಾಳ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಇಂದು ಶನಿವಾರ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸ್ಥಾನಿಯ ಶಿರಸ್ತೇದಾರ್ ನರೇಂದ್ರ ನಾಥ್ ಮಿತ್ತೂರು, ಪಾಣೆಮಂಗಳೂರು ಕಂದಾಯ ನಿರೀಕ್ಷಕರಾದ ಆರ್ ವಿಜಯ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *