ಮೂಡುಬಿದರೆ: ಭಾಷಾವಾರು ಪ್ರಾಂತ್ಯಗಳು ಕನ್ನಡರಾಜ್ಯವಾಗಿ ಕನರ್ಾಟಕದ ಉದಯವಾಗಿದ್ದು ಮಾತ್ರ ಕನ್ನಡಿಗರಿಗೆ ಸಿಕ್ಕಿದ ಸಂಭ್ರಮವಾಗಿದೆ. ಇದನ್ನು ಹೊರತು ಪಡಿಸಿದರೆ ಸಕರ್ಾರದ ನಿರ್ಲಕ್ಷ್ಯದಿಂದಾಗಿಯೇ ಕನರ್ಾಟಕದಲ್ಲಿ ಕನ್ನಡ ಸೊರಗುವಂತಾಗಿದೆ ಎಂದು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದಶರ್ಿ ಹರಿಕೃಷ್ಣ ಪುನರೂರು ಹೇಳಿದ್ದಾರೆ.
mbd_nov1_5

ಅವರು ಕಾಂತಾವರ ಆಶ್ರಯದಲ್ಲಿ ಕನ್ನಡಸಂಘ ಕನರ್ಾಟಕ ರಾಜ್ಯೋತ್ಸವ ಪ್ರಯುಕ್ತ ಕಾಂತಾವರದ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದಲ್ಲಿ ಶನಿವಾರ ನಡೆದ ಕಾಂತಾವರ ಉತ್ಸವ ಐವರು ಸಾಧಕರಿಗೆ ಸಾಹಿತ್ಯ, ಲಲಿತಕಲಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಇನ್ನೂ 5 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಅಜರ್ಿ ಸಲ್ಲಿಕೆಯಾಗಿದೆ. ನಮ್ಮಲ್ಲಿ ಹೆಚ್ಚಿನ ರಾಜಕಾರಣಿಗಳೇ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ ಕನ್ನಡದ ಅಭಿವೃದ್ಧಿಯ ಕನಸು ನನಸಾಗಲು ಹೇಗೆ ಸಾಧ್ಯ ಎಂದವರು ಅಭಿಪ್ರಾಯಪಟ್ಟರು.

ಮಂಗಳೂರು ಸಂಗೀತ ಪರಿಷತ್ ಎಂ.ಆರ್ ವಾಸುದೇವರಾವ್ ಅಧ್ಯಕ್ಷತೆಯಲ್ಲಿ ಸಂಶೋಧಕ ಡಾ. ಯು.ಪಿ.ಉಪಾಧ್ಯಾಯ ಉಪಸ್ಥಿತಿಯಲ್ಲಿ ಡಾ. ಆರ್.ಗಣೇಶ್ ಬೆಂಗಳೂರು ಅವರಿಗೆ ಡಾ. ಯು.ಪಿ.ಉಪಾಧ್ಯಾಯ ದಂಪತಿ ಪ್ರತಿಷ್ಠಾನದ ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರ, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಯಜ್ಞನಾರಾಯಣ ಉಡುಪ ಪ್ರತಿಷ್ಠಾನದ ವಿದ್ವತ್ ಪರಂಪರಾ ಪುರಸ್ಕಾರ, ದೇವ್ದಾಸ್ ಶೆಟ್ಟಿ ಮುಂಬೈ ಅವರಿಗೆ ಮೊಗಸಾಲೆ ಪ್ರತಿಷ್ಠಾನದ ಕಾಂತಾವರ ಲಲಿತಕಲಾ ಪುರಸ್ಕಾರ, ಡಾ.ನಾ.ಸೋಮೇಶ್ವರ ಅವರಿಗೆ ಕಾಂತಾವರ ಸಾಹಿತ್ಯ ಪುರಸ್ಕಾರ, ಆದರ್ಶ ಆಸ್ಪತ್ರೆ ಉಡುಪಿ ಸಂಸ್ಥಾಪಕ ಡಾ. ಜಿ.ಎಸ್.ಚಂದ್ರಶೇಖರ್ ಅವರಿಗೆ ಕನ್ನಡ ಸಂಘದ ವಾಷರ್ಿಕ ವಿಶೇಷ ಗೌರವ ಪುರಸ್ಕಾರ ಮಾಡಲಾಯಿತು.

ನಾವು ಪರಂಪರೆಗೆ ವಾರೀಸುದಾರರಾಗಿ ಬೆಳೆಯಬೇಕು. ಆಗ ಮಾತ್ರ ನಮ್ಮ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆ ಕಾಣಲು ಸಾಧ್ಯ ಎಂದು ಡಾ.ನಾ.ಸೋಮೇಶ್ವರ ಹೇಳಿದರು.
ಕನ್ನಡ ಸಂಘದ ಕಾಯರ್ಾಧ್ಯಕ್ಷ ಡಾ. ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಂಜುನಾಥ ಶೆಟ್ಟಿ ವಂದಿಸಿದರು. ಕಾಂತಾವರ ಸರೋಜಿನಿ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಮೊಗಸಾಲೆ ಪ್ರತಿಷ್ಠಾನದ ನಿರಂಜನ ಮೊಗಸಾಲೆ, ಸಂಘದ ಕಾರ್ಯದಶರ್ಿ ಸದಾನಂದ ನಾರವಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *