ಮೂಡುಬಿದರೆ: ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ನಲ್ಲಿ ರಾಜ್ಯದಲ್ಲಿರುವ ಅಧಿಕೃತ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ಮಾಹಿತಿಯನ್ನು ಪ್ರಕಟಸಿದ್ದು ಇದರಂತೆ ಮೂಡುಬಿದರೆ ವಲಯದಲ್ಲಿ ಭುವನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್ ಅಭಿನಂದನ್, ಶಿತರ್ಾಡಿ (6ರಿಂದ 10ನೇ ತರಗತಿ), ಆಲ್ಫುರ್ಖಾನ್ ಇಸ್ಲಾಮಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಿತ್ತಬೈಲ್, ಪುತ್ತಿಗೆ,(1ರಿಂದ 10ನೇ ತರಗತಿ) ಲಿಟ್ಲ್ ಸ್ಟಾಸರ್್ಇಂಡಿಯನ್ ಸ್ಕೂಲ್ ವಿದ್ಯಾಗಿರಿ, ಕಡಪಲ್ಲ (1ರಿಂದ 10ನೇ ತರಗತಿ) ಮೂರು ಆಂಗ್ಲ ಮಾಧ್ಯಮ ಶಾಲೆಗಳು ಮಾತ್ರ ಅಧಿಕೃತ ಸಿಬಿಎಸ್ಇ ಶಾಲೆಗಳಾಗಿವೆ. ಐಸಿಎಸ್ಇ ಶಾಲೆಗಳು ಯಾವುದೂ ಇರುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತಿಳಿಸಿದೆ.
