ಮೂಡುಬಿದಿರೆ: ವಿದ್ಯಾಗಿರಿ ಜಂಕ್ಷನ್‌ನಲ್ಲಿ ಸ್ಕೂಟರ್‌ಗೆ ಸೋಮವಾರ ಬೆಳಗ್ಗೆ ಪೊಲೀಸ್ ಜೀಪು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಮಾರಿಯಾಡಿ ನಿವಾಸಿ, ಕೂಲಿ ಕಾರ್ಮಿಕ ಬಾವು ಬ್ಯಾರಿ ಅವರು ಮೂಡುಬಿದಿರೆ ಕಡೆಯಿಂದ ಹಂಡೇಲು ಕಡೆಗೆ ಕೆಲಸಕ್ಕೆಂದು ಹೋಗುತ್ತಿದ್ದಾಗ, ವಿದ್ಯಾಗಿರಿಯ ಜಂಕ್ಷನ್‌ನಲ್ಲಿ ಮಂಗಳೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಟಿಪ್ಪರ್ ಅನ್ನು ಓವರ್‌ಟೇಕ್ ಮಾಡುವಾಗ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ನುಜ್ಜುಗುಜ್ಜಾಗಿದ್ದು, ಬಾವು ಬ್ಯಾರಿ ಅವರ ತಲೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ.
