ಮೂಡುಬಿದರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ನ ಪ್ರಾಯೋಜಕತ್ವದಲ್ಲಿ ಕೊಡಮಾಡುವ ಮುದ್ದಣ ಕಾವ್ಯ ಪ್ರಶಸ್ತಿಯು ಈ ಬಾರಿ ಡಾ.ಜಯಪ್ರಕಾಶ್ ಮಾವಿನಕುಳಿ ಅವರ `ಕಾಲಯಾನ’ ಎಂಬ ಕವನ ಸಂಕಲನ ಹಸ್ತಪ್ರತಿಗೆ ಲಭಿಸಿದೆ. ಪ್ರಶಸ್ತಿಗೆ ಒಟ್ಟು 97 ಹಸ್ತಪ್ರತಿಗಳು ಬಂದಿದ್ದು, ವಿಮರ್ಶಕ ಡಾ. ವಸಂತಕುಮಾರ್ ಪೆರ್ಲ, ಸುಬ್ರಾಯ ಚೊಕ್ಕಾಡಿ, ಡಾ.ಎಸ್.ಆರ್.ಅರುಣಕುಮಾರ್ ಅವರು ನೀಡಿದ ತೀರ್ಪಿನ ಹಿನ್ನಲೆಯಲ್ಲಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ.
1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರದ ಗೌರವ ಸಂಭಾವನೆ ಮತ್ತು ತಾಮ್ರಪತ್ರ ಸನ್ಮಾನವನ್ನು ಒಳಗೊಂಡಿದೆ. ಪ್ರತೀ ವರುಷದಂತೆ ಈ ವರುಷದ ಪ್ರಶಸ್ತಿ ಪ್ರದಾನ ಸಮಾರಂಭವು 2015ರ ಜನವರಿಯಲ್ಲಿ ಕಾಂತಾವರದ `ಕನ್ನಡಭವನ’ದಲ್ಲಿ ನಡೆಯಲಿದ್ದು ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನವನ್ನು ನೆರವೇರಿಸಲಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ. ಪ್ರಶಸ್ತಿ ವಿಜೇತ ಕವಿ ಡಾ.ಜಯಪ್ರಕಾಶ್ ಮಾವಿನಕುಳಿ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ವೃತ್ತಿಜೀವನದಲ್ಲಿ ತೊಡಗಿಸಿಕೊಂಡಿದ್ದು 34 ವರ್ಷಗಳ ಬೋಧನಾನುಭವನ್ನು ಹೊಂದಿದ್ದಾರೆ. ಸಮಾಜ ವಿಜ್ಞಾನ, ಸಾಹಿತ್ಯ ಕ್ಷೇತ್ರದಲ್ಲಿ ವಿಧ್ವಾಂಸರಾಗಿಯೂ ಗುರುತಿಸಿಕೊಂಡಿದ್ದಾರೆ. ಮಾವಿನಕುಳಿಯವರ 49 ಕೃತಿಗಳು ಬಿಡುಗಡೆಗೊಳಿಸಿದ್ದಾರೆ.
