ಮಂಗಳೂರು: ಮೊಬೈಲ್ ಇಂಟರ್ನೆಟ್ ದರ ಏರಿಕೆಯನ್ನು ವಿರೋಧಿಸಿ ಮೊಬೈಲ್ ಗ್ರಾಹಕರು ಅ.31ರಂದು ತನ್ನ ಮೊಬೈಲ್ ಡೇಟಾ ಬಂದ್ ಮಾಡುವ ಮೂಲಕ ಟೆಲಿಕಾಂ ಕಂಪೆನಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.
`ಅ.31ರಂದು ಒಂದು ದಿನ ತನ್ನ ಮೊಬೈಲ್ ಡೇಟಾವನ್ನು ಬಂದ್ ಮಾಡಿರಿ’ ಎಂಬ ಸಂದೇಶ ವಾಟ್ಸ್ ಆ್ಯಪ್, ಫೇಸ್ಬುಕ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಪ್ರಚಾರ ಕಾಣುತ್ತಿದೆ.

mbil
ರಾಜ್ಯದ ಎಲ್ಲಾ ಟೆಲಿಕಾಂ ಕಂಪೆನಿಗಳು ಇಂಟೆರ್ನೆಟ್ ಪ್ಯಾಕ್ ದರವನ್ನು ಒಂದೇ ಸಮನೆ ಏರಿಕೆ ಮಾಡಿದ್ದಾರೆ. ಇದರ ವಿರುದ್ಧ ಕೆಂಡಾಮಂಡಲವಾಗಿರುವ ಕೆಲವೊಂದು ಮೊಬೈಲ್ ಗ್ರಾಹಕರು, ಜಾಗೃತಿ ಮೂಡಿಸುವ ಸಲುವಾಗಿ ಬಂದ್ ಮಾಡಲು ಕರೆ ನೀಡಿದ್ದಾರೆ ಎನ್ನಲಾಗಿದೆ.
ಅ.1ರ ನಂತರ ಮೊಬೈಲ್ ದರವನ್ನು ಶೇ.33ರಷ್ಟು ಹೆಚ್ಚಳ ಮಾಡಲಾಗಿದೆ. 2ಜಿಬಿಗೆ ಇದ್ದ ದರವನ್ನು 1ಜಿಬಿಗೆ ಏರಿಕೆ ಮಾಡಲಾಗಿದೆ. ಅಲ್ಲದೆ ಇತರ ಪ್ಯಾಕ್ಗಳ ದರವನ್ನೂ ಸಿಕ್ಕಾಪಟ್ಟೆ ಏರಿಕೆ ಮಾಡಲಾಗಿರುವುದರಿಂದ ಮೊಬೈಲ್ ಡೇಟಾ ಬಂದ್ ಮಾಡಿ ಕಂಪೆನಿಗಳಿಗೆ ಸೆಡ್ಡುಹೊಡೆಯಲು ಮುಂದಾಗಿದೆ.

By Suddi9

Leave a Reply

Your email address will not be published. Required fields are marked *