ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಕಾರು ಸಾಗಿಸುತ್ತಿದ್ದ ಕಂಟೈನರ್ ಮಂಗಳವಾರ ಸಂಜೆ ಮೇಲ್ಸೇತುವೆ ಆಧಾರಸ್ತಂಭ (ಪಿಲ್ಲರ್)ಗೆ ಡಿಕ್ಕಿಯಾಗಿದೆ.12btl-Containerಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಕಾರು ಸಾಗಿಸುತ್ತಿದ್ದ ಕಂಟೈನರ್ ಮೇಲ್ಸೇತುವೆ ಆಧಾರಸ್ತಂಭ (ಪಿಲ್ಲರ್) ಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಕಾರು ಸಾಗಿಸುತ್ತಿದ್ದ ಕಂಟೈನರ್ ಎದುರಿನ ಬಲ ಭಾಗ ಮೇಲ್ಸೇತುವೆ ಪಿಲ್ಲರ್ ಗೆ ಡಿಕ್ಕಿಯಾಗಿ ಭಾರೀ ಶಬ್ಧ ಕೇಳಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಂಟೈನರ್ ಚಾಲಕನ ಮೇಲ್ಭಾಗ ತಗಡು ಕಳಚಿ ಹೋಗಿದ್ದು, ಮೇಲ್ಸೇತುವೆಯಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ಹಿಂದೆಯೂ ಇಂತಹ ಘಟನೆ ನಡೆದಿದ್ದು, ಪದೇ ಪದೇ ಒಂದೇ ಪಿಲ್ಲರಿಗೆ ಡಿಕ್ಕಿಯಾದರೆ ಮೇಲ್ಸೇತುವೆ ಬಾಳಿಕೆ ಬಗ್ಗೆಯೂ ಆತಂಕ ಉಂಟು ಮಾಡಿದೆ ಎಂದು ಸ್ಥಳೀಯ ವರ್ತಕರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *