ಕೈಕಂಬ: ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸಲು ಸಾಧ್ಯವಾಗುವ ಅಭಿವೃದ್ಧಿ ಕಾರ್ಯ ಮಾಡುವುದು ಜನಪ್ರತಿನಿಧಿಯ ಕರ್ತವ್ಯವಾಗಿದ್ದು ಇದು ಸಾಧ್ಯವಾಗಬೇಕಾದರೆ ಕಾರ್ಯಕರ್ತರ ಸಹಕಾರ ಅಗತ್ಯ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ವೈ ಶೆಟ್ಟಿ ಹೇಳಿದ್ದಾರೆ. ಅವರು ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂಬೆಲೊಟ್ಟು, ತುಂಬೆಮಜಲು, ಶಾಂತಿಗುಡ್ಡೆ, ಕಾಪಿಕಾಡು, ಬಾರ್ದಿಲ ಕಲ್ಲಾಡಿ, ಕಟ್ಟೆಮಾರು, ಬಣದಬಳಿ ಮತ್ತು ದೂಡ್ಡಲಿಕೆಗಳಲ್ಲಿ ಅಂದಾಜು 1.77 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಲಾದ ರಸ್ತೆಗಳನ್ನು ಬುಧವಾರ ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿಲೆಂಜಾರು ಗ್ರಾಮಕ್ಕೆ ಇದುವರೆಗೆ ಸುಮಾರು 4 ಕೋಟಿ ಅನುದಾನ ನೀಡಲಾಗಿದೆ ಮುಂದೆ ಇನ್ನಷ್ಟು ಅನುದಾನ ತರುವ ಮೂಲಕ ಬಾಕಿ ಇರುವ ಅಭಿವೃದ್ಧಿ ಕೆಲಸಗಳನ್ನು ಪೂರ್ತಿ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ಧನ ಗೌಡ, ತಾಪಂ ಮಾಜಿ ಸದಸ್ಯ ನಾಗೇಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕ ಭರತ್ ಶೆಟ್ಟಿ , ಜನಾರ್ಧನ ಗೌಡ ಮತ್ತು ನಾಗೇಶ್ ಶೆಟ್ಟಿ ಅವರುಗಳನ್ನು ಶಾಲು ಹೊದೆಸಿ ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯರುಗಳಾದ ನಿತೇಶ್ ಕುಮಾರ್ ದೊಡ್ಡಳಿಕೆ, ಶ್ರೀಮತಿ ಮಂಜುಳಾ, ಶ್ರೀಮತಿ ವಿಜಯ, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ., ಉತ್ತರ ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ಅರುಣಾ ಭಾಸ್ಕರ್ ಶೆಟ್ಟಿ, ಎಸ್ ಟಿ ಮೋರ್ಚಾ ಸದಸ್ಯ ರಾಜೇಶ್ ನಾಯ್ಕ್, ಮುಖಂಡರುಗಳಾದ ಜಗನ್ನಾಥ ಶೆಟ್ಟಿ, ರಾಜೇಶ್ ಶೆಟ್ಟಿ, ಶಶಿಕಲಾ ಜಗದೀಶ್ ಕುಲಾಲ್ ಪಾಕಜೆ, ಚಂದ್ರಶೇಖರ್ ತುಂಬೆ ಮಜಲ್, ಅಶೋಕ್ ಕಟ್ಟೆಮಾರ್,ಚೇತನ್ ಸುವರ್ಣ, ಸತೀಶ್ ಪೂಜಾರಿ ನೀಲಿ ಕಟ್ಟೆಮಾರ್, ಮಹೇಶ್ ಗೌಡ ಮೊದಲಾದವರು ಇದ್ದರು. ಉತ್ತರ ಮಂಡಲ ಬಿಜೆಪಿ ಕಾರ್ಯದರ್ಶಿ ಗಣೇಶ್ ಪಾಕಜೆ ಸ್ವಾಗತಿಸಿ ನಿರೂಪಿಸಿದರು. 


