ಕೈಕಂಬ: ಶ್ರೀ ಕ್ಷೇತ್ರ ಪೆರಾರ ಶ್ರೀ ಬಲವಾಂಡಿ ದೈವಸ್ಥಾನದ ಬಂಟಕಂಬ,ಛತ್ರರಸು ಚಾವಡಿ ಹಾಗೂ ರಾಜಾಂಗಣ ಜೀರ್ಣೋದ್ದಾರದ ಪ್ರಯುಕ್ತ ಪೂರ್ವಭಾವೀ ಸಮಾಲೋಚನಾ ಸಭೆ ಭಾನುವಾರ ಪೆರಾರ ಕ್ಷೇತ್ರದಲ್ಲಿ ಜರಗಿತು.20210929_172524
 ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆ ಬೈಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮ ನಂಬುಗೆಯ ಸಾನಿಧ್ಯ ಬಂಟಕಂಬ ರಾಜಾಂಗಣದ ಜೀರ್ಣೋದ್ದಾರದ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಳ್ಳವುದು ಪವಿತ್ರವಾದುದು ಎಂದು ಹೇಳಿದರು.20210929_172534
98ಲಕ್ಷ ರೂ.ಕ್ರಿಯಾ ಯೋಜನೆ: ಬಂಟಕಂಬ,ರಾಜಾಂಗಣ ಚಾವಡಿ ಹಾಗೂ ಪಿಲಿ ಚಾಮುಂಡಿ ದೈವಸ್ಥಾನ ಜೀರ್ಣೋದ್ದಾರ ಸೇರಿದಂತೆ ಸಮಗ್ರ ಜೀರ್ಣೋದ್ದಾರಕ್ಕೆ ರೂ.98 ಲಕ್ಷದ ಅಂದಾಜು ರೂಪುರೇಷೆ ಸಿದ್ದಪಡಿಸಲಾಗಿದೆ.
ಬಂಟಕಂಬಕ್ಕೆ ಸೂಕ್ತವಾದ ಮರ ಗುರುತಿಸಲಾಗಿದ್ದು ಸರಕಾರದ ಅಂತಿಮ ಆಡಳಿತಾತ್ಮಕ ಅನುಮತಿಗಾಗಿ ಕಾಯಲಾಗುತ್ತದೆ.ಈ ಅನುಮತಿ ದೊರೆತ ಬಳಕವಷ್ಟೇ ಮುಂದುವರಿದ ಪರಿಷ್ಕೃತ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಕ್ಷೇತ್ರದ ಆಡಳಿತಾಧಿಕಾರಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಸಾಯೀಶ್ ಚೌಟ ಅವರು ಹೇಳಿದರು.
ಜಾತ್ರೆಗೂ ಮುನ್ನ ಸಂಕಲ್ಪ ಪೂರ್ಣ:ಫೆಬ್ರವರಿ ತಿಂಗಳಲ್ಲಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ,ನೇಮೋತ್ಸವ ನಡೆಯುದರಿಂದ ಅದಕ್ಕೂ ಮುಂಚಿತವಾಗಿ ಜೀರ್ಣೋದ್ದಾರದ ಕಾಮಗಾರಿಗಳು  ಹಾಗೂ ನಂತರದ ಧಾರ್ಮಿಕ ಪ್ರಕ್ರಿಯೆಗಳು  ನಡೆಯಬೇಕಿದೆ ಎಂದು ಆಡಳಿತಾಧಿಕಾರಿ ತಿಳಿಸಿದರು.
ಜೀರ್ಣೋದ್ದಾರ ಸಮಿತಿ:ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ಅಧ್ಯಕ್ಷತೆಯ ಜೀರ್ಣೋದ್ದಾರ ಸಮಿತಿಯೊಂದನ್ನು ಈಗಾಗಲೇ ರಚಿಸಲಾಗಿದ್ದುಸರಕಾರದ ಧಾರ್ಮಿಕ ದತ್ತಿ ನಿಯಮಗಳ ಪ್ರಕಾರ ನೋಂದಾಯಿಸಲಾಗಿದೆ.ಸಮಿತಿಯ ಇತರ ಪದಾಧಿಕಾರಿಗಳು :ಶಿವಾಜಿ ಶೆಟ್ಟಿ ಕೊಳಕೆಬೈಲು ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಆರಿಸಲಸಗಿದೆ.ಆಡಳಿತಾಧಿಕಾರಿ ಸಾಯೀಶ್ ಚೌಟ ಖಜಾಂಚಿಯಾಗಿ ಸುರೇಶ್ ಅಂಚನ್  ಕಾರ್ಯದರ್ಶಿಯಾಗಿ ಸಮಿತಿಯ ಸದಸ್ಯರಾಗಿ ಡಾ.ಮೋಹನ್ ದಾಸ್ ರೈ ಮುಂಡಬೆಟ್ಟು ಗುತ್ತು,ರಮೇಶ್ ಅಮೀನ್,ಕಾಳಿನಾಥ್ ಕಾಮತ್,ಶೇಖರ ಸಪಳಿಗ.ವಿದ್ಯಾಜೋಗಿ,ಓಂ ಪ್ರಕಾಶ್ ಶೆಟ್ಟಿ,ಪ್ರತೋಷ್ ಮಲ್ಲಿ,ಹರೀಶ್ ಶೆಟ್ಟಿ ಅವರುಗಳನ್ನು ಆರಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಪಡುಪೆರಾರ ಗ್ರಾ.ಪಂ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ,ಕ್ಷೇತ್ರದ ಅರ್ಚಕ ಮುರಳೀಧರ ಭಟ್,ಡಾ.ಮೋಹನ್ ದಾಸ್ ರೈ ಮುಂಡಬೆಟ್ಟುಗುತ್ತು,ಪ್ರತಾಪ್ ಚಂದ್ರ ಶೆಟ್ಟಿ ಬ್ರಾಣ ಬೆಟ್ಟುಗುತ್ತು ಅವರುಗಳು ವೇದಿಕೆಯಲ್ಲಿದ್ದರು.ಪೆರಾರ ಕ್ಷೇತ್ರಕ್ಕೆ ಸಂಬಂಧಿಸಿದ 16 ಗುತ್ತು ಮನೆತನ,ಒಳಗುತ್ತುಗಳ ಪ್ರಮುಖರು,ಗ್ರಾಮಸ್ಥರು ಪಾಲ್ಗೊಂಡಿದ್ದರು.ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಸುರೇಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *