ಕೈಕಂಬ : ಎಡಪದವಿನ ಪಟ್ಲಚ್ಚಿಲ್‌ನ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ದಂಪತಿ ಪುತ್ರ, ಎಂಸಿಎಫ್‌ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ ಯಾನೆ ಕಿಟ್ಟ(೨೪) ಎಂಬವರು ಕಣಜದ ಹುಳುಗಳ(ಪಿಲಿಕುಂಡೋಲು) ದಾಳಿಯಿಂದ ತೀವ್ರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ.gur-sep-22-kitta-1ಮನೆಯ ತೆಂಗಿನ ಮರಗಳ ಕಾಯಿ ಕೀಳಲು ತಾನು ಹೊಸದಾಗಿ ಖರೀದಿಸಿ ತಂದಿದ್ದ ಯಂತ್ರ ಬಳಸಿಕೊಂಡು ಭಾನುವಾರ ನೆರೆಮನೆಯವರ ತೆಂಗಿನ ಮರದಿಂದ ತೆಂಗಿನಕಾಯಿ ಕೀಳಲು ಮರವೇರಿದ ಸಂದರ್ಭದಲ್ಲಿ ಮರದಲ್ಲಿದ್ದ ಗೂಡು ಕಟ್ಟಿದ್ದ ಕಣದ ಹುಳುವಿನ ಗೂಡಿಗೆ ಕೇಶವರ ತಲೆ ತಾಗಿದ್ದು, ಏಕಾಏಕಿಯಾಗಿ ಹುಳುಗಳು ದಾಳಿ ಮಾಡಿವೆ. ಹುಳುಗಳ ದಾಳಿಗೆ ಅವರ ಮೈಮೇಲೆ ೭೦ಕ್ಕೂ ಹೆಚ್ಚು ಕಡೆ ಗಾಯಗಳಾಗಿವೆ.gur-sep-22-kittaತಕ್ಷಣ ಮೂಡಬಿದ್ರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಭರ್ತಿಗೊಳಿಸಲಾಯಿತು. ಚಿಕಿತ್ಸೆ ಫಲಿಸದೆ ಕೇಶವ ಕೊನೆಯುಸಿರೆಳೆದರು. ಅವಿವಾಹಿತರಾಗಿದ್ದ ಅವರು ಮೂವರು ಸಹೋದರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಬುಧವಾರ ಅಂತ್ಯಸAಸ್ಕಾರ ನಡೆಯಿತು.

By suddi9

Leave a Reply

Your email address will not be published. Required fields are marked *