ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕೋವಿಡ್ ಲಸಿಕಾ ಶಿಬಿರದಲ್ಲಿ ದೈವಸ್ಥಾನದ ವೈದ್ಯನಾಥ ದರ್ಶನ ಪಾತ್ರಿ ಅಡ್ವಕೇಟ್ ಕೌಡೂರು ಚಂದ್ರಹಾಸ ಪೂಜಾರಿ ಲಸಿಕೆ ಪಡೆದರು.
ಗಂಜಿಮಠ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ಜೊತೆಯಲ್ಲಿ ಪಂಚಾಯತ್ ಸದಸ್ಯರಾದ ಸುನಿಲ್ ಕುಮಾರ್, ಸಚಿನ್ ಅಡಪ, ಜಿ. ಎಂ ಉದಯ ಭಟ್, ರಾಜೇಶ್ ಸುವರ್ಣ, ಸ್ಥಳೀಯ ವೈದ್ಯೆ ಶ್ವೇತಾ ಪೈ, ಗ್ರಾಮಕರಣಿಕ ಮುತ್ತಪ್ಪ ಬಡಿಗೇರ, ಗುರುಪುರ ಸೇವಾ ಬ್ರಿಗೇಡ್‌ನ ಪುರಂದರ ಮಲ್ಲಿ, ಶ್ಯಾಮ್ ಆಚಾರ್ಯ, ರಮಾನಂದ ಶೆಟ್ಟಿ, ಮಾಜಿ ಸದಸ್ಯೆ ಶೋಭಾ ಡಿ ಮತ್ತಿತರರು ಇದ್ದರು.
