ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ಶಾಲಾ ಪ್ರಾರಂಭೋತ್ಸವ ವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರುಗಳಾದ ಯಶವಂತ ಪೊಳಲಿ, ಲೋಕೇಶ ಭರಣಿ, ಪೋಷಕರಾದ ಮೊಹಮ್ಮದ್ ಪುಂಚಮೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳನ್ನು ಉಷ್ಣಾಂಶ ಪರಿಶೀಲಿಸಿ, ಸ್ಯಾನಿಟೈಸರ್ ಹಾಕಿ, ಪುಷ್ಪಗಳನ್ನು ನೀಡಿ ಪುಷ್ಪವೃಷ್ಟಿ ಯೊಂದಿಗೆ ಸ್ವಾಗತಿಸಲಾಯಿತು. ಸರಕಾರದಿಂದ ನೀಡಿದ ಉಚಿತ ಪಠ್ಯಪುಸ್ತಕಗಳನ್ನು ಈ ಸಮಯದಲ್ಲಿ ವಿತರಿಸಲಾಯಿತು
