ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಬುಧವಾರ ಸಂಜೆ ಗುತ್ತಿನವರು ಮತ್ತು ಊರ ಭಕ್ತರ ಸಮ್ಮುಖದಲ್ಲಿ ಶ್ರೀ ಧೂಮಾವತಿ(ಜುಮಾದಿ) ದೈವಕ್ಕೆ ಚಿನ್ನದ ಹೊದಿಕೆಯೊಂದಿಗೆ ನವೀಕರಿಸಲಾದ `ಖಡ್ಸಲೆ’ ಅರ್ಪಿಸಲಾಯಿತು.
ಶ್ರೀ ವೈದ್ಯನಾಥ ದೈವದ ಪಾತ್ರಿ ಕೌಡೂರು ಚಂದ್ರಹಾಸ ಪೂಜಾರಿ ಮತ್ತು ಜುಮಾದಿ ಪಾತ್ರಿ ತನಿಯಪ್ಪ ಪೂಜಾರಿಯವರು ಪೂಜೆ ನಡೆಸಿದ ಬಳಿಕ ದೈವಕ್ಕೆ ಹೊಸ ಖಡ್ಸಲೆ ಒಪ್ಪಿಸಲಾಯಿತು. ಕಳೆದ ಜೂನ್ ೩೦ರಂದು ದೈವಸ್ಥಾನದ ಶ್ರೀ ವೈದ್ಯನಾಥ ದೈವಕ್ಕೆ ಚಿನ್ನದ ಹೊದಿಕೆಯ ನವೀಕೃತ ಖಡ್ಸಲೆ ಅರ್ಪಿಸಲಾಗಿತ್ತು. ಮಂಗಳೂರಿನ ಲಕ್ಷ್ಮಿ ಗಣೇಶ್ ಜ್ಯುವೆಲ್ಲರ್ಸ್ನ ಗಣೇಶ್ ಕೆಕೆಆರ್ ಶೇಟ್ ಮತ್ತು ಕಾರ್ಮಿಕ ವೃಂದ ಈ ಖಡ್ಸಲೆ ಸಿದ್ಧಪಡಿಸಿದೆ.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರ ಪ್ರಮೋದ್ ಕುಮಾರ್ ರೈ ದೋಣಿಂಜೆಗುತ್ತು, ಬೆಳ್ಳೂರುಗುತ್ತು ರವಿ ಶೆಟ್ಟಿ, ಪುರಂದರ ಮಲ್ಲಿ ದೋಣಿಂಜೆಗುತ್ತು, ಪುರುಷೋತ್ತಮ ಮಲ್ಲಿ, ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಪ್ರವೀಣ್ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ವಿಲಾಸ್ ಶೆಟ್ಟಿ ಮರಂಕರಿಯಗುತ್ತು, ಪ್ರೇಮನಾಥ ಮಾರ್ಲ, ಸುಬ್ಬಯ್ಯ ಭಂಡಾರಿ ಸುಳ್ಯಗುತ್ತು, ರೋಹಿತಾಕ್ಷ ಭಂಡಾರಿ, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯರಾದ ಸದಾಶಿವ ಶೆಟ್ಟಿ ಕೆ, ನಳಿನಿ ಶೆಟ್ಟಿ ಹಾಗೂ ಸಂಧ್ಯಾ ಶೆಟ್ಟಿ, ಜಲಜಾ, ಸೇಸಮ್ಮ, ಚಂದ್ರಹಾಸ ಕಾವ, ಯಶವಂತ ಆಳ್ವ, ರಮಾನಂದ ಶೆಟ್ಟಿ, ದೇವದಾಸ ಅಂಚನ್, ದೈವದ ಪರಿಚಾರಕರಾದ ಗಿರೀಶ್ ಇಟ್ಟಬಾಗಿಲು, ದೊಂಬಯ್ಯ ಪೂಜಾರಿ, ಸೀತಾರಾಮ ಪೂಜಾರಿ, ತುಕರಾಮ, ಭಾಸ್ಕರ, ಲೋಕೇಶ್ ಕಾಂಚನ್ ಹಾಗೂ ದೈವಾರಾಧಕರು ಉಪಸ್ಥಿತರಿದ್ದರು


