ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶ್ರೀದೇವಳದ ಆಡಳಿತ ಅಧಿಕಾರಿಯಾದ ಪ್ರಶಾಂತ್ ನಡೆಸಿದರು. ಈ ಪ್ರಕ್ರಿಯೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಪೊಳಲಿ ಗಿರಿ ಪ್ರಕಾಶ್ ತಂತ್ರಿಯವರು ಹಾಗೂ ಕ್ಷೇತ್ರದ ತಂತ್ರಿಗಳಾದ ಉದಯ ಪಾಂಗಣ್ಣಯ ಉಪಸ್ಥಿತರಿದ್ದು ರಘು ಎಲ್ ಶೆಟ್ಟಿ ಸೆ.14 ರಂದು ಮಂಗಳವಾರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಬಿ ರಘುರಾಮ್ ಭಟ್ , ಕೆ ಬಾರಿ ಭಂಡಾರಿ ,ಗೋಪಾಲಕೃಷ್ಣ ಶೆಟ್ಟಿ , ಗಂಗಾಧರ ಪೂಜಾರಿ , ಜಯರಾಮ ಶೆಟ್ಟಿ , ದಿವಾಕರ್ ನಾಯ್ಕ್ , ವೀಣಾ ಭಟ್, ಸವಿತಾ ಎನ್ ಶೆಟ್ಟಿ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀ ರಘುರಾಮ ಭಟ್ ಸ್ವಾಗತಿಸಿ, ಶ್ರೀಮತಿ ಸವಿತಾ ಎನ್ ಶೆಟ್ಟಿ ವಂದಿಸಿದರು.
