ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶುಅಭಿವೃದ್ದಿ ಯೋಜನೆ ಬಂಟ್ವಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಆನ್ಸ್ ಕ್ಲಬ್ ಬಂಟ್ವಾಳ, ಆಯುಷ್ ಇಲಾಖೆ, ಮತ್ತು ಸ್ತ್ರೀ ಶಕ್ತಿ ಒಕ್ಕೂಟ ಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ “ಪೋಷಣ್ ಮಾಸಾಚರಣೆ” ಕಾರ್ಯಕ್ರಮ ದ ಉದ್ಘಾಟನೆ ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ತಯಾರಿಸಿದ ವಸ್ತುಪ್ರದರ್ಶನ ಮಾರಾಟ ಮೇಳದ ಉದ್ಘಾಟನೆ ಬಿಸಿರೋಡು ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು.WhatsApp Image 2021-09-15 at 2.03.40 PMಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ವಳವೂರು,ಮಾತನಾಡಿ ಸರಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇಲಾಖೆಯ ಜೊತೆ ಸಂಘಸಂಸ್ಥೆಗಳು ಸಹಕಾರ ನೀಡಿದರೆ ಮಾತ್ರ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು. ಸರಕಾರದ ಕಾರ್ಯಕ್ರಮಗಳು ಪ್ರತಿಯೊಬ್ವರಿಗೂ ತಲುಪುವ ಮೂಲಕ ಅದರ ಪ್ರಯೋಜನ ಪಡೆಯುವಂತಾಗಲೂ ಇಲಾಖೆಯ ಜೊತೆ ಎಲ್ಲರ ಸಹಕಾರ ನೀಡಬೇಕು.

ಪ್ರಸ್ತುದ ದಿನಗಳಲ್ಲಿ ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ಅತೀ ಅವಶ್ಯಕ ಮತ್ತು ಉತ್ತಮ ಕಾರ್ಯಕ್ರಮವಾಗಿದೆ ಎಂದರು. ಆರೋಗ್ಯದ ಬಗ್ಗೆ ನಿರ್ಲಕ್ಷ  ಭಾವನೆ ತೋರದೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ, ಹಾಗೂ ಸಾವಯವ ಕೃಷಿ ಉತ್ಪನ್ನಗಳನ್ನು ಹೆಚ್ಚು ಸೇವನೆ ಮಾಡಿ ಎಂದು ಅವರು ಹೇಳಿದರು.

ರೋಟರಿ ಕ್ಲಬ್ ನ ಕೋಶಾಧಿಕಾರಿ ಬೇಬಿ ಕುಂದರ್, ಅವರು ಮಾತನಾಡಿ ಅಂಗನವಾಡಿ ಕಾರ್ಯ ಕರ್ತರು ಕೊರೊನಾ ಸಂದರ್ಭದಲ್ಲಿ ಮಾಡಿದ ಅನನ್ಯ ಸೇವೆಯನ್ನು ಗುರುತಿಸಿ ಗೌರವ ನೀಡುವ ಕೆಲಸ ಆಗಬೇಕಾಗಿದೆ. ಸ್ತ್ರೀ ಶಕ್ತಿ ಒಕ್ಕೂಟದ ಸದಸ್ಯರ ವಸ್ತಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿದ ಮಹಿಳಾ ಉಪನಿರ್ದೇಶಕ ಪಾಪ ಬೋವಿ ಅವರು ಮಾತನಾಡಿ ಮಕ್ಕಳ ಅಪೌಷ್ಟಿಕತೆ, ಗರ್ಭಿಣಿಯರ ರಕ್ತಹೀನತೆ ಮಕ್ಕಳ ಆರೋಗ್ಯ ಪೌಷ್ಟಿಕ ತೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಅಧಿಕಾರಿಗಳ ಸ್ಪಂದನೆಗೆ ಅನುಗುಣವಾಗಿ ಜನರ ಸಹಕಾರ ಸಿಗುತ್ತದೆ. ಸರಕಾರದ ಯೋಜನೆ ಗಳು ಕಾರ್ಯರೂಪಕ್ಕೆ ತರಲು ಇಲಾಖೆಯ ಜೊತೆ ಸಾರ್ವಜನಿಕ ರ ಸಹಕಾರ ನಿರಂತರವಾಗಿ ಇರಲಿ ಎಂದು ಅವರು ಹೇಳಿದರು. ಪ್ರಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ಶಿಶುಯೋಜನಾಧಿಕಾರಿ ಗಾಯತ್ರಿ ಕಂಬಳಿ ಅವರು ಜನರಿಗೆ ಜಾಗೃತಿ ಮೂಡಿಸುವುದೇ ಕಾರ್ಯಕ್ರಮ ದ ಉದ್ದೇಶವಾಗಿದೆ. ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ವಿನೂತನ ಶೈಲಿಯಲ್ಲಿ ಮಾಡುತ್ತಿದ್ದು , ತಂತ್ರಜ್ಞಾನ, ಜನಾಂದೋಲನದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಿದೆ.

ಆಯುಷ್ಯ ಇಲಾಖೆಯ ವೈದ್ಯಾಧಿಕಾರಿ ಡಾ! ಮಣಿಕರ್ಣಿಕ ಅವರು ರಕ್ತಹೀನತೆ ಹಾಗೂ ಆರೋಗ್ಯ ಮಾಹಿತಿ ನೀಡಿದರು. ಸಹಾಯಕ ಶಿಶುಯೋಜನಾಧಿಕಾರಿ ಶೀಲಾವತಿ, ಸ್ತ್ರೀ ಶಕ್ತಿ ಒಕ್ಕೂಟದ ಸದಸ್ಯರಾದ ಸಂಜಾತ, ಜಲಜ ಉಪಸ್ಥಿತರಿದ್ದರು. ಶಿಶುಯೋಜನಾಧಿಕಾರಿ ಗಾಯತ್ರಿ ಕಂಬಳಿ ಸ್ವಾಗತಿಸಿ ದರು. ಎ.ಸಿ.ಡಿ.ಪಿ.ಒ. ಶೀಲಾವತಿ ಧನ್ಯ ನೀಡಿದರು. ಮೇಲ್ವಿಚಾರಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

ಪೌಷ್ಟಿಕ ಅಹಾರ ಪ್ರಾತ್ಯಕ್ಷಿಕೆ, ದವಸಧಾನ್ಯಗಳನ್ನು ಉಪಯೋಗಿಸಿ ಪೋಷಣ್ ರಂಗೋಲಿ ಬಿಡಿಸುವ ಕಾರ್ಯ ಕ್ರಮ ಆಯೋಜನೆ ಮಾಡಲಾಗಿತ್ತು. ಪೋಷಣ್ ಅಭಿಯಾನ ದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಸ್ಪರ್ಧೆ ಗಳನ್ನು ಇಲಾಖೆ ಅಯೋಜನೆ ಮಾಡಲಾಗಿತ್ತು, ಈ ಸ್ಪರ್ಧೆ ಯಲ್ಲಿ ಭಾಗವಹಿಸಿದ ಹಾಗೂ ವಿಜೇತರಾದ ವರಿಗೆ ಬಹುಮಾನ ವಿತರಿಸಲಾಯಿತು.ಆಯುಷ್ಯ ಇಲಾಖೆ ಯ ವತಿಯಿಂದ ಚ್ಯವನ ಪ್ರಾಸನ ಉಚಿತವಾಗಿ ನೀಡಲಾಯಿತು.

By suddi9

Leave a Reply

Your email address will not be published. Required fields are marked *