ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳಗ್ರಾಮದಲ್ಲಿ ಹುಚ್ಚು ನಾಯಿಯೊಂದು ಇಲ್ಲಿನ ಮನೆಗೆ ನುಗ್ಗಿ ಬಾಲಕನಿಗೆ ಕಚ್ಚಿದೆ. ಪಲ್ಲಿಪಾಡಿ , ಸಾಣೂರು ಇಲ್ಲಿನ ಮನೆಗಳ ಹಸುಗಳಿಗೆ. ಸಿಕ್ಕ ಸಿಕ್ಕ ನಾಯಗಳನ್ನು ಕಚ್ಚುತ್ತಾ ಹೋಡಿಹೋಗುವುದನ್ನು ಗಮನಿಸಿದ ಇಲ್ಲಿಯ ನಾಗರಿಕರು ನಾಯಿಯನ್ನು ಬೆನ್ನಟ್ಟಿ ಹಿಡಿದು ಕೊಂದಿದ್ದಾರೆ.
ಪ್ರಾಣಿಗಳನ್ನು ಸಾಕುವವರು ಎಲ್ಲರು ಮುಂಜಾಗ್ರತೆ ವಹಿಸಿ ತಮ್ಮ ತಮ್ಮ ಸಾಕು ಪ್ರಾಣಿಗಳಿಗೆ ರೇಬಿಸ್ ಚುಚ್ಚು ಮದ್ದು ನೀಡಬೇಕು . 15 ದಿನಗಳವರೆಗೆ ಸಾಕು ಪ್ರಾಣಿಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಕಟ್ಟಿಹಾಕಬೇಕೆಂದು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಮುಂದಿನ ಯಾವುದೇ ಅನಾಹುತ ಆಗದಂತೆ ಎಚ್ಚರವಹಿಸಲು ಸೂಚಿಸಿದ್ದಾರೆ.
