ಮೂಡುಬಿದಿರೆ: ಶತಮಾನದ ಸಂಪ್ರದಾಯದಂತೆ ಮೂಡುಬಿದಿರೆಯಲ್ಲಿ ಯಕ್ಷಗಾನೀಯ ಶ್ರೀಕೃಷ್ಣ ವೇಷಧಾರಿ ಪೇಟೆಯ ಅಲ್ಲಲ್ಲಿ ಕಟ್ಟಲಾದ ಮೊಸರ ಕುಡಿಕೆಗಳನ್ನು ಕುಣಿದು ಒಡೆಯುವ ಮೂಲಕ ಮಂಗಳವಾರ ಮೊಸರುಕುಡಿಕೆ ಆಚರಣೆ ನಡೆಯಿತು.WhatsApp Image 2021-09-01 at 8.51.00 AMಶ್ರೀಗೋಪಾಲ ಕೃಷ್ಣ ದೇವಳದ ಆಶ್ರಯದಲ್ಲಿ ಸುಮಾರು 104 ವರ್ಷಗಳಿಂದ ಆಚರಣೆಯಲ್ಲಿರುವ ಈ ಸಂಪ್ರದಾಯದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಮಳಲಿ ಚಂದ್ರಶೇಖರ್ ಶ್ರೀಕೃಷ್ಣನಾಗಿ ಪೇಟೆಯಲ್ಲಿ ಕಟ್ಟಿರುವ ಕುಡಿಕೆಗಳನ್ನು ಒಡೆದಿದ್ದಾರೆ.WhatsApp Image 2021-09-01 at 8.51.00 AM (1)ಗೋಪಾಲಕೃಷ್ಣ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದ ಬಳಿಕ ತೆಂಕತಿಟ್ಟು ಯಕ್ಷಗಾನ ಶೈಲಿಯ ಕೃಷ್ಣವೇಷಧಾರಿ ದೇವಳದಿಂದ ಹೊರಟು, ಪೇಟೆಯ ರಸ್ತೆಗೆ ಅಡ್ಡಲಾಗಿ ಅಲ್ಲಲ್ಲಿ ತೂಗು ಹಾಕಿರುವ ಮೊಸರ ಕುಡಿಕೆಗಳನ್ನು ಹಿಮ್ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುವುದು ಇಲ್ಲಿನ ವಿಶೇಷ.WhatsApp Image 2021-09-01 at 8.50.59 AMಶತಮಾನದ ಈ ಪರಂಪರೆಯಲ್ಲಿ ದಿ. ಮೋನಪ್ಪ ಕುಲಾಲ್ ಮಳಲಿ 37 ವರ್ಷ ಕೃಷ್ಣ ವೇಷಧಾರಿಯಾಗಿ ಕುಡಿಕೆ ಒಡೆದಿದ್ದರು. ಆ ಬಳಿಕ ಅವರ ಮಗ ದಿವಾಕರ್ ಕುಲಾಲ್ 2018ರವರೆಗೆ 27 ವರ್ಷಗಳ ಕಾಲ ಕೃಷ್ಣವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ದಿವಾಕರ್ ಕುಲಾಲ್ ನಿಧನ ನಂತರ ಚಂದ್ರಶೇಖರ್ ಕುಲಾಲ್ ಅವರು ಈ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.WhatsApp Image 2021-09-01 at 8.51.01 AM

By suddi9

Leave a Reply

Your email address will not be published. Required fields are marked *