ಸುದ್ದಿ9ಮಂಗಳೂರು ಮಹಾನಗರ ವ್ಯಾಪ್ತಿಗೆ ಒಳಪಟ್ಟ ನಂ.21ನೇ ತಿರುವೈಲು ವಾರ್ಡ್ ನ ಚರ್ಚ್ ಸಮೀಪದ ಬಸ್ಸು ತಂಗುದಾಣವನ್ನು ಮಹಾನಗರ ಪಾಲಿಕೆಯ ಮಹಾಪೌರರಾದ ಮಹಾಬಲ ಮಾರ್ಲರವರು ಉದ್ಘಾಟಿಸಿದರು. ದಾನಿಗಳಾದ ರಿಬ್ಕೋ ಟ್ರೇಡಿಂಗ್ ಕೋ ಇವರ ವತಿಯಿಂದ ನಿರ್ಮಿಸಲಾದ ಈ ತಂಗುದಾನಕ್ಕೆ ಸುಮಾರು 1.5ಲಕ್ಷ ರೂಪಾಯಿ ವೆಚ್ಚವಾಗಿದ್ದು ಸುಂದರವಾಗಿ ರೂಪುಗೊಂಡಿದೆ. ಸಮಾರಂಭದಲ್ಲಿ ರಿಬ್ಕೋ ಮಾಲಕರಾದ ಒಮೇರ್, ನಗರ ಪಾಲಿಕೆಯ ಸ್ಥಳೀಯ ಸದಸ್ಯೆಯರಾದ ಹೆಮಲತಾ ರಘುಸಾಲ್ಯಾನ್, ಹಾಗೂ ಸ್ಥಳೀಯರಾದ ಚಂದ್ರಹಾಸ್ ರೈ, ರವೀಂದ್ರ ನಾಯಕ್, ಮೋಹನ್ದಾಸ್ ಶೆಟ್ಟಿ, ರಘುಸಾಲ್ಯಾನ್, ಶೇಖರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.








