ಸುದ್ದಿಮೂಡುಬಿದರೆ: ಕಾಂತಾವರ ಕನ್ನಡಸಂಘದ ಕಾಂತಾವರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನ ಕನರ್ಾಟಕ ರಾಜ್ಯೋತ್ಸವ ದಿನ ಕಾಂತಾವರ ಉತ್ಸವ- 2014ನಡೆಯಲಿದೆ.
ಅಂದು ಬೆಳಗ್ಗೆ ಗಂಟೆ 10.00ರಿಂದ 12.30ರ ತನಕ ಕೃತಿಗಳ ಅನಾವರಣ ಸಂಭ್ರಮ `ನುಡಿಹಾರ – 6′ ಮತ್ತು ಮೂರು ಪುಸ್ತಕಗಳ ಬಿಡುಗಡೆಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೀಣಾವಾದನ ಹಾಗೂ ಕನ್ನಡದ ಹಾಡುಗಾರಿಕೆನಡೆಯಲಿದೆ
ಮಧ್ಯಾಹ್ನ 3.00ರಿಂದ 5.30ವರೆಗೆ ಮೊಗಸಾಲೆ ಪ್ರತಿಷ್ಠಾನದ ಕಾಂತಾವರ ಸಾಹಿತ್ಯ ಮತ್ತು ಲಲಿತಕಲಾ ಪುರಸ್ಕಾರ, ಡಾ.ಯು.ಪಿ ಉಪಾಧ್ಯಾಯ ದಂಪತಿ ಪ್ರತಿಷ್ಠಾನದ ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರ ಯಜ್ಞನಾರಾಯಣ ಉಡುಪ ಪ್ರತಿಷ್ಠಾನದ ವಿದ್ವತ್ ಪರಂಪರಾ ಪುರಸ್ಕಾರ ಸಂಘದ ವಾಷರ್ಿಕ ವಿಶೇಷ ಗೌರವ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
ಪುತ್ತೂರು ಕನರ್ಾಟಕ ಸಂಘದ ಅಧ್ಯಕ್ಷ ಪುರಂದರ ಭಟ್ ಅಧ್ಯಕ್ಷತೆಯಲ್ಲಿ ಕೃತಿಗಳ ಅನಾವರಣ ಕಾರ್ಯಕ್ರಮದಲ್ಲಿ ಡಾ. ಎಸ್.ಆರ್.ಅರುಣಕುಮಾರ್ ಸಂಪಾದಿಸಿದ 2013ರ ಸಾಲಿನ `ನುಡಿನಮನ’ದ ಉಪನ್ಯಾಸಗಳ ಸಂಪುಟ `ನುಡಿಹಾರ – 6′ ವನ್ನು ಪುತ್ತೂರು ಕನರ್ಾಟಕ ಸಂಘ ಕಾರ್ಯದಶರ್ಿ ಡಾ. ಹೆಚ್.ಜಿ.ಶ್ರೀಧರ್, ಡಾ. ಸೀತಾಲಕ್ಷ್ಮಿ ಕಕರ್ಿಕೋಡಿ ಸಂಪಾದಿಸಿದ ಮತ್ತು ಮೈಸೂರಿನ ಸಂವಹನ ಪ್ರಕಾಶನ ಪ್ರಕಟಿಸಿದ ವಿಮಶರ್ಾ ಲೇಖನಗಳ ಸಂಪುಟ `ಉಲ್ಲಂಘನೆ: ಆಕೃತಿ ಆಶಯ’ವನ್ನು ಸರಕಾರಿ ಪ್ರ. ದ.ಕಾಲೇಜು, ಬೆಟ್ಟಂಪಾಡಿ ಪ್ರಾಧ್ಯಾಪಕ ಡಾ. ವರದರಾಜ ಚಂದ್ರಗಿರಿ, ಬೆಂಗಳೂರಿನ ಸೃಷ್ಟಿ ಪ್ರಕಾಶನದವರು ಪ್ರಕಟಿಸಿದ ಮೊಗಸಾಲೆಯವರ ಹೊಸ ಕಥಾಸಂಗ್ರಹ ‘ಸನ್ನಿಧಿಯಲ್ಲಿ ಸೀತಾಪುರ’ವನ್ನು ಪುತ್ತೂರಿನ ಲೇಖಕ, ಕೌನ್ಸೆಲಿಂಗ್ ತಜ್ಞ ಗಂಗಾಧರ ಬೆಳ್ಳಾರೆ, ಬೆಂಗಳೂರಿನ ಸೃಷ್ಟಿ ಪ್ರಕಾಶನದವರು ಪ್ರಕಟಿಸಿದ ಮೊಗಸಾಲೆಯವರ ಹೊಸ ಕವನಸಂಗ್ರಹ ‘ದೇವರು ಮತ್ತೆ ಮತ್ತೆ’ ಪುತ್ತೂರಿನ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅನಾವರಣಗೊಳಿಸಲಿದ್ದಾರೆ
ಪ್ರಶಸ್ತಿ ಪುರಸ್ಕೃತರು:
ಡಾ. ಆರ್.ಗಣೇಶ್ ಬೆಂಗಳೂರು ಅವರಿಗೆ ಡಾ. ಯು.ಪಿ.ಉಪಾಧ್ಯಾಯ ದಂಪತಿ ಪ್ರತಿಷ್ಠಾನದ ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರ, ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಯಜ್ಞನಾರಾಯಣ ಉಡುಪ ಪ್ರತಿಷ್ಠಾನದ ವಿದ್ವತ್ ಪರಂಪರಾ ಪುರಸ್ಕಾರ,ದೇವ್ದಾಸ್ ಶೆಟ್ಟಿ ಮುಂಬೈ ಅವರಿಗೆ ಮೊಗಸಾಲೆ ಪ್ರತಿಷ್ಠಾನದ ಕಾಂತಾವರ ಲಲಿತಕಲಾ ಪುರಸ್ಕಾರ, ಡಾ.ನಾ.ಸೋಮೇಶ್ವರ, ಬೆಂಗಳೂರು (ಕಾಂತಾವರ ಸಾಹಿತ್ಯ ಪುರಸ್ಕಾರ ) ಆದರ್ಶ ಆಸ್ಪತ್ರೆ ಉಡುಪಿ ಸಂಸ್ಥಾಪಕ ಡಾ. ಜಿ.ಎಸ್.ಚಂದ್ರಶೇಖರ್ (ಸಂಘದ ವಾಷರ್ಿಕ ವಿಶೇಷ ಗೌರವ ಪುರಸ್ಕಾರ)ಪ್ರದಾನ ನಡೆಯಲಿದೆ. ನುಡಿನಮನ’ದ ಶಾಶ್ವತ ಪ್ರಾಯೋಜಕ ಸಿ.ಕೆ ಪಡಿವಾಳ್, ಕಾರ್ಕಳ ಎಎಸ್.ಪಿ ಕೆ.ಅಣ್ಣಾಮಲೈ ಉಪಸ್ಥಿತಿಯಲ್ಲಿ ಮಂಗಳೂರು ಸಂಗೀತ ಪರಿಷತ್ ಎಂ.ಆರ್ ವಾಸುದೇವರಾವ್ ಅಧ್ಯಕ್ಷತೆಯಲ್ಲಿ ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದಶರ್ಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕನ್ನಡ ಸಂಘದ ಕಾಯರ್ಾಧ್ಯಕ್ಷ ಡಾ. ನಾ.ಮೊಗಸಾಲೆ ತಿಳಿಸಿದ್ದಾರೆ.





