ಸುದ್ದಿ9ಬಂಟ್ವಾಳ: ದೀಪವು ಕತ್ತಲಿನಲ್ಲಿ ಚೆಲ್ಲುವ ಬೆಳಕಿನಂತೆ ವ್ಯಕ್ತಿಗೆ ಸೂಕ್ತ ಸಂಸ್ಕಾರ ದೊರೆತಾಗ ಮಾತ್ರ ಆತನಲ್ಲಿ ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಲ್ಲಡ್ಕ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಒಡಿಯೂರು ಸಂಸ್ಥಾನದ ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಗೋಳ್ತಮಜಲು ಘಟಕ ಇದರ ಪ್ರಥಮ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಮಾತನಾಡಿ, ಪಾಶ್ಚಾತ್ಯರಿಂದ ಸಮಯ ಪಾಲನೆಯಂತಹ ಸದ್ವಿಚಾರ ಅನುಕರಣೆ ಮಾಡುವುದರ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿ ನಮಗೆ ಬೇಕಿಲ್ಲ ಎಂದರು.
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಯೋಜನೆ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಉಪನ್ಯಾಸಕಿ ಅಕ್ಷತ ಕೆ.ಎಂ., ಶಿಲ್ಪಾ ಗೊಂಬೆ ಬಳಗ ಕಲಾವಿದ ರಮೇಶ್ ಆಚಾರ್ಯ, ಹಿಂದೂ ಜಾಗರಣ ವೇದಿಕೆ ವಿಟ್ಲ ಘಟಕ ಸಂಚಾಲಕ ರತ್ನಾಕರ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮತ್ತಿತರರು ಇದ್ದರು.
ಗೋಳ್ತಮಜಲು ಘಟಕ ಸಮಿತಿ ಅಧ್ಯಕ್ಷೆ ಲಿಖಿತಾ ಶೆಟ್ಟಿ ಸ್ವಾಗತಿಸಿ, ವೇದ ಸಾಲ್ಯಾನ್ ವಂದಿಸಿದರು. ಮೇಲ್ವಿಚಾರಕ ಸದಾಶಿವ ಅಳಿಕೆ ಮತ್ತು ಸಂಯೋಜಕಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.
—

 

By Suddi9

Leave a Reply

Your email address will not be published. Required fields are marked *