ಮುಂಬಯಿ : ಮುಂಬಯಿಯ ಸುರೇಖಾ ಹೇಮನಾಥ ದೇವಾಡಿಗ ಅವರ ಎಂ.ಫಿಲ್ ಪದವಿಗೆ ಸಲ್ಲಿಸಿದ ಸಂಪ್ರಬಂಧ ‘ದೇವಾಡಿಗ ಜನಾಂಗ ಒಂದು ಸಾಂಸ್ಕೃತಿಕ ಅಧ್ಯಯನ’ ಕೃತಿಗೆ ೨೦೧೯-೨೦ನೇ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರೂಪಾಯಿ ೨೫,೦೦೦ ನಗದು ಪುರಸ್ಕಾರ ಲಭಿಸಿದೆ.Surekha H.Devadiga (A1)ದೇವಾಡಿಗ ಜನಾಂಗದ ಹಿನ್ನೆಲೆ, ಜೀವನ ವಿಧಾನ, ಆಚರಣೆಗಳು, ಸಾಧಕರು, ವಿವಿಧ ಸ್ಥಳಗಳಲ್ಲಿ ಸ್ಥಾಪಿತವಾದ ದೇವಾಡಿಗ ಸಂಘಗಳು ಇದನ್ನೆಲ್ಲ ಒಳಗೊಂಡ ೨೦೧೯ರಲ್ಲಿ ಪ್ರಕಟಗೊಂಡ ಈ ಕೃತಿಯು ಹಲವು ವಿಮರ್ಶಕರಿಂದ ವಿಮರ್ಶೆಗೊಳಪಟ್ಟು ಒಳ ಮತ್ತು ಹೊರನಾಡಿನ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತ ಸರಕಾರದ ಪುರಸ್ಕಾರ ದೊರಕಿರುವುದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಹೊಸ ಹಿರಿಮೆಯನ್ನು ಮೂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದೇರೆಬೈಲು ಕೊಂಚಾಡಿ ಮೂಲತಃ ಸುರೇಖಾ ದೇವಾಡಿಗ ಪ್ರಸ್ತುತ ಬೃಹನ್ಮುಂಬಯಿ ಇಲ್ಲಿನ ವರ್ಲಿ ನಿವಾಸಿ ಆಗಿದ್ದಾರೆ. ಮಂಗಳೂರುನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವೀಧರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ೨೦೧೬ ರಲ್ಲಿ ಎಂ.ಎ ಪದವಿ ಪಡೆದು ೨೦೧೯ರಲ್ಲಿ ಎಂ.ಫಿಲ್ ಪದವಿಗೆ ಭಾಜನರಾಗಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಇವರ ಮಾರ್ಗದರ್ಶನದಲ್ಲಿ ಈ ಕೃತಿಯು `ಅಭಿಜಿತ್’ ಪ್ರಕಾಶನದ ಮೂಲಕ ಬೆಳಕು ಕಂಡಿದೆ. ಸುರೇಖಾ ಇವರ ಇತ್ತೀಚಿನ ಕೃತಿ `ಹೋರಾಟದ ಮೂಲಕ ಕ್ರಾಂತಿಯ ಕನಸು ಕಂಡ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್’ ಒಳ ಹಾಗೂ ಹೊರನಾಡಿನಲ್ಲಿ ಸಂಚಲನವನ್ನು ಮೂಡಿಸಿದೆ.

ಕಳೆದ ಮೂರು ದಶಕಗಳಿಂದ ಮುಂಬಯಿಯಲ್ಲಿ ನೆಲೆಸಿರುವ ಅವರು ಕ್ರೀಡಾಪಟುವಾಗಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಮುಂಬಯಿ ದೇವಾಡಿಗ ಸಂಘದ ಸಕ್ರಿಯ ಸದಸ್ಯೆಯಾಗಿದ್ದು ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಜೊತೆ ಕೋಶಾಧಿಕಾರಿ ಆಗಿರುವರು. ಸೃಜನಾ ಬಳಗ ಮುಂಬಯಿ, ಕಲಾಜಗತ್ತು, ಕನ್ನಡಿಗ ಕಲಾವಿದರ ಪರಿಷತ್ತು, ಮುಂಬಯಿ ಕನ್ನಡ ಸಂಘ ಇವುಗಳಲ್ಲಿ ಸಕ್ರಿಯ ಸದಸ್ಯೆಯಾಗಿದ್ದಾರೆ.

ಸುರೇಖಾ ಇವರ ಸಾಧನೆಯನ್ನು ಗುರುತಿಸಿ ಮುಂಬಯಿ ದೇವಾಡಿಗ ಸಂಘ ಮತ್ತು ಸಂಘದ ಸ್ವರ್ಣ ಮಹೋತ್ಸವ ಕ್ರೀಡೋತ್ಸವದಲ್ಲಿ ಸನ್ಮಾನ, ಸಂಘದ ೯೦ರ ವಾರ್ಷಿಕೋತ್ಸವದಲ್ಲಿ `ಕ್ರೀಡಾ ಸಾಧಕಿ’ ಬಿರುದು ಪ್ರದಾನಿಸಿ ಮತ್ತು ಬಾರ್ಕೂರು ಏಕನಾಥೇಶ್ವರ ದೇವಸ್ಥಾನದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರಿಂದ ಸನ್ಮಾನ, ಉಡುಪಿ ಪಲಿಮಾರು ಮಠಾಧೀಶರಿಂದ ಸನ್ಮಾನ, ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಿಂದ ಸನ್ಮಾನ, ೨೦೧೯ರಲ್ಲಿ ಕಲಾಜಗತ್ತು ಇದರ `ವಿಶ್ವ ತುಳು ಸಮ್ಮೇಳನ’ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಯಾಗಿಸಿ`ತೌಳವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದೆ.

By suddi9

Leave a Reply

Your email address will not be published. Required fields are marked *