ಬಂಟ್ವಾಳ:ಇಲ್ಲಿನ ಲೊರೆಟ್ಟೊ ಹಿಲ್ಸ್ ಮತ್ತು ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಅಣ್ಣಳಿಕೆ ಸಮೀಪದ ಹಾಂತ್ಲಾಜೆ ಸದಾಶಿವ ಶೆಟ್ಟಿಗಾರ್ ಇವರ ಗದ್ದೆಯಲ್ಲಿ ‘ಆಟಿದ ತಿಂಗೊಲು ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ಪ್ರಯುಕ್ತ ನೇಜಿ ನಾಟಿ ಮತ್ತು ವಿವಿಧ ಸ್ಪರ್ಧೆ ಭಾನುವಾರ ನಡೆಯಿತು.

ಲೊರೆಟ್ಟೊ ಹಿಲ್ಸ್ ಕ್ಲಬ್ಬಿನ ಅಧ್ಯಕ್ಷ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.ಕ್ಲಬ್ಬಿನ ಸ್ಥಾಪಕಾಧ್ಯಕ್ಷಅವಿಲ್ಮಿನೇಜಸ್,ಪೂರ್ವಾಧ್ಯಕ್ಷೆಂ.ಪದ್ಮರಾಜ ಬಲ್ಲಾಳ್ ಮಾವಂತೂರು, ನಿಕಟಪೂರ್ವ ಅಧ್ಯಕ್ಷ ಆಂಟನಿ ಸಿಕ್ವೇರಾ,ಸಿದ್ದಕಟ್ಟೆ ಕ್ಲಬ್ಬಿನ ಅಧ್ಯಕ್ಷ ಮೈಕಲ್ ಡಿಕೋಸ್ತ ಶುಭ ಹಾರೈಸಿದರು. ಕ್ಲಬ್ಬಿನ ಸದಸ್ಯರು ಕೆಸರು ಗದ್ದೆ ಸ್ಪರ್ಧೆ ಮತ್ತು ನೇಜಿ ನೆಟ್ಟು ಗಮನ ಸೆಳೆದರು.
ಇದೇ ವೇಳೆ ಕ್ಲಬ್ಬಿನ ಸದಸ್ಯ ರಾಮಚಂದ್ರ ಶೆಟ್ಟಿಗಾರ್ ದಂಪತಿಗೆ ಸನ್ಮಾನ, ಸ್ಥಳೀಯ ನಿವಾಸಿ ಕೃಷ್ಣ ಮೂಲ್ಯ ಇವರ ವೈದ್ಯಕೀಯ ಚಿಕಿತ್ಸೆಗೆ ರೂ ೨೫ಸಾವಿರ ಮೊತ್ತದ ಸಹಾಯಧನ ಚೆಕ್ ಹಸ್ತಾಂತರಿಸಿದರು.
ಕ್ಲಬ್ಬಿನ ಕಾರ್ಯದರ್ಶಿ ಕೆ. ರಮೇಶ್ ನಾಯಕ್ ರಾಯಿ, ರಾಜೇಶ್ ನೆಲ್ಯಾಡಿ, ಪ್ರಮುಖರಾದ ಸುರೇಶ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಜನಾರ್ಧನ ನಾಯ್ಕ ಕರ್ಪೆ ಮತ್ತಿತರರು ಇದ್ದರು.
