ಮುಂಬಯಿ : ಪತ್ರಿಕಾ ಭವನ ಟ್ರಸ್ಟ್ ಮಂಗಳೂರು ಇದರ ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ರಾಮಕೃಷ್ಣ ಆರ್. (ಸಂಯುಕ್ತ ಕರ್ನಾಟಕ) ಆಯ್ಕೆ ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಆಗಿ ವೇಣು ವಿನೋದ್ (ವಿಜಯವಾಣಿ) ಹಾಗೂ ಕೋಶಾಧಿಕಾರಿ ಆಗಿ ಹರ್ಷ (ಡೆಕ್ಕನ್ ಹೆರಾಲ್ಡ್) ಆಯ್ಕೆ ಆಗಿದ್ದಾರೆ. ಇಂದಿಲ್ಲಿ ಪತ್ರಿಕಾ ಭವನದಲ್ಲಿ ಟ್ರಸ್ಟ್ ನ ಅಧ್ಯಕ್ಷ ಆನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕೋವಿಡ್-೧೯ ಸಂದರ್ಭದಲ್ಲಿ ಪತ್ರಿಕಾಭವನ ಟ್ರಸ್ಟ್ ವತಿಯಿಂದ ೨೦೨೦ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ೨೪೬ ಸದಸ್ಯರಿಗೆ ರೂಪಾಯಿ ೨,೮೦,೦೮೮ ಮೊತ್ತದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ೨೦೨೧ನೇ ಸಾಲಿನಲ್ಲಿ ೩೧೧ ಪತ್ರಕರ್ತರಿಗೆ ರೂಪಾಯಿ ೨,೧೫,೧೧೦ ಮೊತ್ತದ ಅಕ್ಕಿ ಕಿಟ್ಗಳನ್ನು ಟ್ರಸ್ಟ್ನಿಂದ ನೀಡಲಾಗಿದೆ. ಪತ್ರಕರ್ತರಿಗೆ ಈ ಕಿಟ್ಗಳನ್ನು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ವಿತರಿಸಲಾಗಿದೆ.
ಟ್ರಸ್ಟ್ ನ ಎಲ್ಲಾ ಕೆಲಸ ಕಾರ್ಯಗಳಿಗೆ ಸಹಕಾರ ನೀಡುತ್ತಿರುವ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ನ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಮತ್ತು ಎಲ್ಲಾ ಟ್ರಸ್ಟಿಗಳಿಗೂ ಆನಂದ ಶೆಟ್ಟಿ ಅಭಿವಂದಿಸಿದರು.
ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಮತ್ತು ಟ್ರಸ್ಟೀ ಬಿ. ರವೀಂದ್ರ ಶೆಟ್ಟಿ ಉಪಸ್ಥಿತರಿದ್ದು ಟ್ರಸ್ಟ್ನ ಕೋಶಾಧಿಕಾರಿ ರವಿ ಪೊಸವಣಿಕೆ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ವಂದಿಸಿದರು.
