ಬಂಟ್ವಾಳ:ಇಲ್ಲಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಜೆಸಿಐ ಮತ್ತಿತರ ಸಂಘ ಸಂಸ್ಥೆಗಳ ವತಿಯಿಂದ ಬಡ ಮಹಿಳೆ ನಾಗಮ್ಮ ಎಂಬವರಿಗೆ ನಿರ್ಮಾಣಗೊಳ್ಳುತ್ತಿರುವ ಉಚಿತ ಮನೆ ಕಾಮಗಾರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಆದೇಶದಂತೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ ೫೦ಸಾವಿರ ಮೊತ್ತದ ಸಹಾಯಧನ ಚೆಕ್ ಶುಕ್ರವಾರ ಹಸ್ತಾಂತರಿಸಿದರು.
ಜನಜಾಗೃತಿ ವೇದಿಕೆ ಮತ್ತು ವಿಪತ್ತು ನಿರ್ವಹಣಾ ಘಟಕದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಶುಕ್ರವಾರ ಚೆಕ್ ಹಸ್ತಾಂತರಿಸಿದರು. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಜಯಾನಂದ ಪಿ., ಮೇಲ್ವಿಚಾರಕಿ ಹರಿಣಾಕ್ಷಿ ರೈ, ಸೇವಾ ಪ್ರತಿನಿಧಿ ಭವ್ಯ, ಕಳ್ಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ, ಜೆಸಿಐ ಕಾರ್ಯದರ್ಶಿ ರೋಶನ್ ರೈ, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ, ಸದಸ್ಯ ಮನೋಜ್ ಕನಪಾಡಿ, ಜಯಂತಿ ಮತ್ತಿತರರು ಇದ್ದರು.
