ಕೈಕಂಬ : ಯುವವಾಹಿನಿ (ರಿ )ಕುಪ್ಪೆಪದವು ಘಟಕದ ವತಿಯಿಂದ ಆಧುನಿಕ ಪದ್ದತಿಯಲ್ಲಿ ಭತ್ತದ ಬೆಳೆಯ ಮಾಹಿತಿ ಕಾರ್ಯಾಗಾರವನ್ನು ಮುತ್ತೂರು ಗ್ರಾಮದ ಚಂದ್ರಮಜಲಿನ ಕೊಂಕಣರ ಕೋಡಿ ಎಂಬಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿಗಳಾದ ಸಂದೇಶ್ ಮತ್ತು ದಿನೇಶ್ ಅವರು ಭತ್ತದ ಕೃಷಿಯಲ್ಲಿ ಬೀಜೋಪಾಚಾರ ಹಾಗೂ ಆಧುನಿಕ ತಂತ್ರಜ್ಞಾನ ಬಳಸುವ ಬಗ್ಗೆ ಮಾಹಿತಿಯನ್ನು ನೀಡಿದರು. ಚಿತ್ರದುರ್ಗ ಜಿಲ್ಲೆಯ ಎಸ್ ಎಸ್ ಎ ವಿದ್ಯಾ ಸಂಸ್ಥೆಯ ಉಪನ್ಯಾಸಕರಾಗಿರುವ ಡಾ.ಹನುಮಂತಪ್ಪನವರು ಸಾವಯವ ಗೊಬ್ಬರದಿಂದ ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಉಪಾಧ್ಯಕ್ಷ ಜಗದೀಶ್ ವಹಿಸಿದ್ದರು. ಹಿರಿಯರಾದ ಗೋಪಾಲ್ ಕರ್ಕೇರ, ಸತೀಶ್ ಚಂದ್ರಮಜಲು, ಫೆಲಿಕ್ಸ್ ರೋಜಾರಿಯೋ,ಉಮಾನಾಥ ಚಂದ್ರಮಜಲು ಉಪಸ್ಥಿತರಿದ್ದರು ಯುವವಾಹಿನಿ ಕುಪ್ಪೆಪದವು ಘಟಕದ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಅಂಬೆಲೊಟ್ಟು ಸ್ವಾಗತಿಸಿದರು.ಘಟಕದ ನಿಕಟಪೂರ್ವ ಅಧ್ಯಕ್ಷ ಅಜಯ್ ಅಮೀನ್ ನಾಗಂದಡಿ ವಂದಿಸಿ ಗೀತಾ ಚಂದ್ರಮಜಲು ನಿರೂಪಿಸಿದರು. 

