ವಿಟ್ಲ : ಮೇಲ್ದರ್ಜೆಗೇರಿದ ವಿಟ್ಲ ಪೊಲೀಸ್ ಠಾಣೆಗೆ ಮೊದಲ ಇನ್ಸ್ಪೆಕ್ಟರ್ ಆಗಿ ಬಂದಿರುವ ಹೆಚ್ ಇ ನಾಗರಾಜ್ ಇವರನ್ನು ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಲಯನ್ ಜಿಲ್ಲಾ ರಾಜ್ಯಪಾಲಕ ಡಾ| ಗೀತಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಕೋಶಾಧಿಕಾರಿ ಗಂಗಾಧರ್, ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷ ಸಂತೋಶ್ ಕುಮಾರ್ ಶೆಟ್ಟಿ, ಸದಸ್ಯರುಗಳಾದ ಮಂಗೇಶ್ ಭಟ್, ಪ್ರಭಾಕರ ಶೆಟ್ಟಿ, ಮೊಹಮ್ಮದ್ ಇಕ್ಬಾಲ್, ಮನೋಜ್ ರೈ, ಮುರಳಿಪ್ರಸಾದ್ ಮತ್ತು ರವಿಶಂಕರ್ ಉಪಸ್ಥತರಿದ್ದರು.
