ಕೈಕಂಬ: ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಗುತ್ತಿನವರು ಮತ್ತು ಊರವರ ಸಹಕಾರದಲ್ಲಿ ನವೀಕರಿಸಲಾದ ಚಿನ್ನದ ಹೊದಿಕೆಯ `ಖಡ್ಸಲೆ’ಯನ್ನು ದೈವಸ್ಥಾನದ ಭಂಡಾರಕ್ಕೆ ಅರ್ಪಿಸಲಾಯಿತು.
ದೈವಸ್ಥಾನದಲ್ಲಿ ಈ ಬಾರಿ ನಡೆದ ವಾರ್ಷಿಕ `ದೊಂಪದ ಬಲಿ’ ಸೇವೆಯ ಸಂದರ್ಭದಲ್ಲಿ ಹಳೆಯ ಖಡ್ಸಲೆಯಲ್ಲಿ ಒಡಕಿರುವುದು ಬೆಳಕಿಗೆ ಬಂದಿದ್ದು, ಅದನ್ನೀಗ ಸಂಪೂರ್ಣ ಚಿನ್ನದ ಹೊದಿಕೆಯೊಂದಿಗೆ ನವೀಕರಿಸಲಾಗಿದೆ. ಮಂಗಳೂರು ಶರವಿನ ಲಕ್ಷಿö್ಮÃ ಗಣೇಶ್ ಜ್ಯುವೆಲ್ರ‍್ಸ್ನ ಕೆ.ಕೆ.ಆರ್ ಶೇಟ್ ಕುಸುರಿ ಕೆಲಸದೊಂದಿಗೆ ಖಡ್ಸಲೆ ಸಿದ್ಧಪಡಿಸಿದ್ದಾರೆ.
ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದ ಮನೆಯಲ್ಲಿ ಪೂಜಾ ವಿಧಿ-ವಿಧಾನ ನಡೆದ ಬಳಿಕ ನವೀಕರಿಸಲಾದ ಖಡ್ಸಲೆ ಸಮರ್ಪಿಸಲಾಯಿತು. ದೈವಸ್ಥಾನದ ತಂತ್ರಿ ವಾಸುದೇವ ಭಟ್ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗಡಿಕಾರರು ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ, ಬೆಳ್ಳೂರುಗುತ್ತು ರವಿ ಶೆಟ್ಟಿ, ಸುಳ್ಯಗುತ್ತು ಸುಬ್ಬಯ್ಯ ಭಂಡಾರಿ, ಪುರಂದರ ಮಲ್ಲಿ ದೋಣಿಂಜೆಗುತ್ತು, ಪುರುಷೋತ್ತಮ ಮಲ್ಲಿ ದೋಣಿಂಜೆಗುತ್ತು, ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ, ಜಿ ಕೆ ಕಿಟ್ಟಣ್ಣ ರೈ ಕಾರಮೊಗರುಗುತ್ತು, ರಾಜು ಶೆಟ್ಟಿ, ಚಂದ್ರಹಾಸ ಕಾವ, ಉದ್ಯಮಿ ಸುಜೀತ್ ಆಳ್ವ, ಉದ್ಯಮಿ ಗೋಪಾಲಕೃಷ್ಣ ಪೂಜಾರಿ, ನರಸಿಂಹ ಪೂಜಾರಿ, ಇಸ್ತಿç ಬಾಬು, ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿ, ದೈವದ ಚಾಕರಿಯವರು ಹಾಗೂ ದೈವ ಭಕ್ತರು ಉಪಸ್ಥಿತರಿದ್ದರು.
