ಕೈಕಂಬ : ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಸೋಮವಾರ ಪೊಳಲಿ ದೇವಸ್ಥಾನದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘವು ರೈತರಿಗಾಗಿ ಮಹೀಂದ್ರ ಕಂಪೆನಿಯಿ0ದ ಖರೀದಿಸಿದ ಟ್ರ‍್ಯಾಕ್ಟರ್ ಮತ್ತು ನಾಟಿಯ ಎರಡು ಯಂತ್ರಗಳ ಕೀಲಿಕೈಯನ್ನು ಶಾಸಕ ರಾಜೇಶ್ ನಾಯ್ಕ್ ಸಂಘದ ಅಧ್ಯಕ್ಷ ಸಂಪತ್ ಕುಮಾರ್‌ಗೆ ಹಸ್ತಾಂತರಿಸಿದರು.

ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದಲೇ ಯ0ತ್ರ ನಿರ್ವಹಣೆ :
ಪೊಳಲಿ ದೇವಳದ ಅರ್ಚಕ ಪದ್ಮನಾಭ ಭಟ್ ಪೂಜೆ ನೆರವೇರಿಸಿದರು.
ಉಳುಮೆ ಮತ್ತು ನಾಟಿಗೆ ಬಳಸುವ ಯಂತ್ರಗಳ ಬಗ್ಗೆ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಮಾಹಿತಿ ನೀಡಿದರು. ಉಳುಮೆ ಟ್ರ‍್ಯಾಕ್ಟರ್, ನಾಟಿಯ ಯಂತ್ರ ಹಾಗೂ ನೇಜಿ ಟ್ರೇಗಳನ್ನು 15 ಲಕ್ಷ ರೂಗೆ ಖರೀದಿಸಲಾಗಿದೆ. ಇದನ್ನು ಸಂಘದ ಮೂಲಕ ರೈತರಿಗೆ ಒದಗಿಸಲಾಗುತ್ತದೆ. ಟ್ರಾಕ್ಟರ್ ಉಳುಮೆಗೆ ಗಂಟೆಗೆ 1,200 ರೂ, ನಾಟಿ ಯಂತ್ರಕ್ಕೆ ಗಂಟೆಗೆ 850 ರೂ ಹಾಗೂ ಟ್ರೇ ಒಂದರ ಬಳಕೆಗೆ ದಿನಕ್ಕೆ 2 ರೂಪಾಯಿಯಂತೆ ಒಟ್ಟು 20 ದಿನಕ್ಕೆ 2,000 ರೂ ಬಾಡಿಗೆ ಪಡೆಯಲಾಗುತ್ತದೆ. ಯಂತ್ರದಿ0ದ ಉಳುಮೆ ಮತ್ತು ನಾಟಿ ರೈತರಿಗೆ ಲಾಭದಾಯಕ ಮತ್ತು ಕೂಲಿಯಾಳುಗಳ ಸಮಸ್ಯೆ ಬಾಧಿಸದು ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಜಾರಾಮ್ ಭಟ್, ಎಸ್‌ಡಿಸಿಸಿ ಬ್ಯಾಂಕ್ ಸೂಪರ್‌ವೈಸರ್ ಕೇಶವ ಕಿಣಿ, ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವೆಂಕಟೇಶ್ ನಾವಡ, ನಿರ್ದೇಶಕರಾದ ದೇವದಾಸ್ ಹೆಗ್ಡೆ ಅಮ್ಮುಂಜೆಗುತ್ತು, . ಅಬೂಬಕ್ಕರ್, ಕರುಣಾಕರ ಶೆಟ್ಟಿ, ನಿರಂಜನಿ ಸಿ. ಶೆಟ್ಟಿ, ಮ್ಯಾನೇಜರ್ ವಿಜಯ್ ರವಿ ಫೆರ್ನಾಂಡಿಸ್, ಮಹೀಂದ್ರ ಕಂಪೆನಿ ಡೀಲರ್ ದೇವರಾಜ್ ಮಾಣೈ, ಕೊಬೊಟೊ ಸೇಲ್ಸ್ ಮ್ಯಾನೇಜರ್ ದಿಲೀಪ್, ಪವನ್ ಕುಮಾರ್, ನಾಗೇಶ್ ರಾವ್ , ಸುಬ್ರಾಯ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು .
ಇದೇ ಸಂದರ್ಭದಲ್ಲಿ ಹೊಸತಾಗಿ ಖರೀದಿಸಿದ ಯಂತ್ರಗಳಿಂದ ಪೊಳಲಿ ಶ್ರೀನಿವಾಸ ಭಟ್ಟರ ಹಡಿಲು ಗದ್ದೆಯಲ್ಲಿ ಉಳುಮೆ ಮತ್ತು ನಾಟಿಗೆ ಚಾಲನೆ ನೀಡಿದರು.
ಪೊಳಲಿ ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳು ಸಹಕರಿಸಿದರು.
