ಕೈಕಂಬ : ಪ್ರಧಾನಿ ಮೋದೀಜಿಯವರ ಘೋಷಣೆಯಂತೆ ದೇಶವ್ಯಾಪಿ ನಡೆಯುತ್ತಿರುವ ಸಂಪೂರ್ಣ ಉಚಿತ ಲಸಿಕೆ ಕಾರ್ಯಕ್ರಮದಡಿ ಸಾಮಾಜಿಕವಾಗಿ ನಿರಂತರ ಸಂಪರ್ಕದಲ್ಲಿರುವ ಸೇವಕರಾದ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಜೂ. ೨೨ರಂದು ಕೈಕಂಬದಲ್ಲಿ ೫೦೦, ಸುರತ್ಕಲ್‌ನಲ್ಲಿ ೧,೦೦೦ ಹಾಗೂ ಕಾವೂರಿನಲ್ಲಿ ೫೦೦ ಮಂದಿ ರಿಕ್ಷಾ-ಟ್ಯಾಕ್ಸಿ ಚಾಲಕರಿಗೆ ಲಸಿಕೆ ನೀಡಲಾಯಿತು ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.22vpkovid lasike

ಅವರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಮಂಗಳವಾರ ಕೈಕಂಬದಲ್ಲಿ ಗುರುಪುರ, ಎಡಪದವು, ಪಡುಪೆರಾರ, ಗಂಜಿಮಠ, ಕಂದಾವರ, ಮುತ್ತೂರು ಪಂಚಾಯತ್ ವ್ಯಾಪ್ತಿಯ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕ-ಮಾಲಕರಿಗೆ ಬೃಹತ್ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಅವರು ಮಾತನಡಿದರು.22-1

ಗುರುಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಗುರುಪುರ, ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ ಮತ್ತು ಸಂದೀಪ್ ಪಚ್ಚನಾಡಿ, ಎಡಪದವು ಗ್ರಾಪಂ ಅಧ್ಯಕ್ಷ ಸುಕುಮಾರ್, ಪಡುಪೆರಾರ ಅಧ್ಯಕ್ಷೆ ಅಮಿತಾ ಶೆಟ್ಟಿ,ಮುತ್ತೂರು ಗ್ರಾಪಂ ಅಧ್ಯಕ್ಷ ಸತೀಶ್ ಬಳ್ಳಾಜೆ, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್‌ರಾಜ್, ತಾಪಂ ನಿಕಟಪೂರ್ವ ಸದಸ್ಯರಾದ ನಾಗೇಶ್ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ, ಎಡಪದವು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ, ಕುಳವೂರು ಶಕ್ತಿ ಕೇಂದ್ರ ಅಧ್ಯಕ್ಷ ಮಹಾಬಲ ಸಾಲ್ಯಾನ್, ಬಿಜೆಪಿ ಪ್ರಮುಖರಾದ ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ಶೇಖರ ನೇಲಚ್ಚಿಲ್, ಥಾಮಸ್ ಸಿಕ್ವೇರ, ಮಾಧವ ಕಾಜಿಲ, ಶೋಧನ್ ಕುಮಾರ್ ಕಂದಾವರ, ನಾಗೇಶ್ ಕುಲಾಲ್, ಹರೀಶ್ ಬಳ್ಳಿ, ಶ್ರವಣ್ ಶೆಟ್ಟಿ, ಸಂದೀಪ್ ಕಾಂಜಿಲಕೋಡಿ, ರಿಕ್ಷಾ ಯೂನಿಯನ್ ಮುಖಂಡರಾದ ಭರತ್ ಕೈಕಂಬ, ಚಂದ್ರಶೇಖರ, ಜನಾರ್ದನ ಪೂಜಾರಿ, ಯಶವಂತ, ನಾಗೇಶ್ ಕುಲಾಲ್ ಬಜ್ಪೆ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಕೈಕಂಬ ರಿಕ್ಷಾ ಯೂನಿಯನ್ ಮಾಜಿ ಅಧ್ಯಕ್ಷ ರವಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.

By suddi9

Leave a Reply

Your email address will not be published. Required fields are marked *