ಕೈಕಂಬ: ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಪಾಂಡಿಗುರಿ ಎಂಬಲ್ಲಿಯ ನಿವಾಸಿ ಜಯರಾಮ ಶೆಟ್ಟಿ ಯಾನೆ ಕುಟ್ಟಿ ಶೆಟ್ಟಿ(೫೪) ಜೂನ್ ೧೬ ಬುಧವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಬಜಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

19vp jayaram shetty ಅವರ ಮೃತದೇಹವು ಇಂದು ಜೂ.೧೯ ರಂದು ಮೃತದೇಹ ಶನಿವಾರ ಬೆಳಿಗ್ಗೆ  ಕುಳವೂರು ಗ್ರಾಮದ ಬಳ್ಳಾಜೆಯ ಪಲ್ಗುಣಿ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಿರು ಆಣೆಕಟ್ಟೆಯ ಬಳಿ ಪತ್ತೆಯಾಗಿದೆ.   ವೃತ್ತಿಯಲ್ಲಿ ಕೃಷಿಕರಾಗಿದ್ದ ಜಯರಾಮ ಶೆಟ್ಟಿಯವರಿಗೆ ಪತ್ನಿ, ಓರ್ವ ಪುತ್ರಿ ಮತ್ತು ಓರ್ವ ಪುತ್ರ ಇದ್ದಾರೆ. ಬಜಪೆ ಪೊಲೀಸರು ಶವದ ಮಹಜರು ನಡೆಸಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿಗೆ ಕಾರಣವೇನು ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

By suddi9

Leave a Reply

Your email address will not be published. Required fields are marked *