ಕೈಕಂಬ : ಕೊರೊನಾ ಸಂಕಷ್ಟದ ಈ ಕಾಲದಲ್ಲಿ ಒಪ್ಪೊತ್ತಿನ ಕೂಳಿಗೂ ಪರದಾಟ ಸ್ಥಿತಿ ಎದುರಾಗಿದ್ದು, ಉಳ್ಳವರಲ್ಲಿ ಕೆಲವರು ಮಾನವೀಯತೆ ನೆಲೆಯಲ್ಲಿ ಹಸಿದವರ ಹೊಟ್ಟೆಗೆ ಹಿಟ್ಟು ಕೊಡುವುದುಂಟು. ಅಂತಹವರ ಸಾಲಿನಲ್ಲಿ ವಾಮಂಜೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮೋಹನದಾಸ್ ಬಂಗೇರ ಒಬ್ಬರು.e4ea2d89-06f5-41b4-a000-2736ce8ce761

ಕೊರೊನಾ ಮಹಾಮಾರಿ ಬಾಧಿಸಿದ್ದ ಕಳೆದ ಬಾರಿಯೂ ಹಲವರಿಗೆ ಹಕ್ಕಿ ಸಹಿತ ದಿನಸಿ ಕಿಟ್ ವಿತರಿಸಿ ಆತ್ಮತೃಪ್ತಿ ಕಂಡುಕೊಂಡಿದ್ದ ಬಂಗೇರ ಈ ಬಾರಿ ವಾಮಂಜೂರು ಆಸುಪಾಸಿನ ಹಾಗೂ ಮಂಗಳೂರಿನ ೧೦೦ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.7b0bd271-936f-45ed-b5c4-9f9362584761

ಎಂದೂ ಪ್ರಚಾರ ಬಯಸದ ಇವರು, ಅನ್ಯ ಸಂದರ್ಭಗಳಲ್ಲೂ ನಿರ್ಗತಿಕರಿಗೆ ನೆರವಾಗುವ ಸಹೃದಯಿ. ಇವರ ಈ ಸೇವೆ ಎಲ್ಲೆಡೆ ಪ್ರಸಂಶೆಗೊಳಗಾಗಿದ್ದು, ಕಿಟ್ ಪಡೆದುಕೊಂಡ ಹಸಿದವರ ಹರ್ಷ ಹೇಳತೀರದು ಎಂದು ಬಂಗೇರರ ಒಡನಾಡಿಯೊಬ್ಬರು ಹೇಳಿದ್ದಾರೆ.eb0e149e-ff89-486f-a4df-16d15f6b4bac

3bbf0ce8-9296-4fbb-acea-b2d4c4aaa8ed (1)

By suddi9

Leave a Reply

Your email address will not be published. Required fields are marked *