ಸುದ್ದಿ9ಕಾಸರಗೋಡು: ಹಣಕಾಸು ಸಂಸ್ಥೆಗಳಿಂದ ನಗ-ನಗದು ದೋಚಲು ಸ್ಕೆಚ್ ಹಾಕಿದ್ದ ಐವರು ಅಂತಾರಾಜ್ಯ ದರೋಡೆಕೋರರ ತಂಡವನ್ನು ಉಪ್ಪಳ ಸಮೀಪ ಪೊಲೀಸರು ಬಂಧಿಸುವ ಮೂಲಕ ಸಂಭವನೀಯ ಅನಾಹುತಗಳನ್ನು ತಪ್ಪಿಸಿದ್ದಾರೆ.

ಕಾರ್ಕಳದ ಸಾಣೂರಿನ ಜಯಶೀಲ (36), ಉಪ್ಪಳದ ಮಣ್ಣಂಗುಳಿಯ ಅಬ್ದುಲ್ಅಜೀಜ್ ಶೇಕ್ (45), ಮುಂಬಯಿಯ ಭಾಸ್ಕರ (63), ದೀನಾನಾಥ್ (48), ಕೋಲ್ಕತಾ ನಿವಾಸಿ ಮುಂಬಯಿಯಲ್ಲಿ ನೆಲೆಸಿರುವ ಮೃತ್ಯುಂಜಯದಾಸ್ (32) ಬಂಧಿತ ಆರೋಪಿಗಳಾಗಿದ್ದು ಇವರಿಂದ 1 ಪಿಸ್ತೂಲು, 6 ಮದ್ದು ಗುಂಡುಗಳು, 3 ತಲವಾರುಗಳು, ಮುಖವಾಡ, ನೈಲಾನ್ ಹಗ್ಗ, ಬೀಗ ಮುರಿಯುವ ಕಬ್ಬಿಣದ ರಾಡ್ ಸಹಿತ ನಕಲಿ ನಂಬರ್ ಪ್ಲೇಟ್ ಹೊಂದಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಉಪ್ಪಳ ಸಮೀಪದ ಸೋಂಕಾಲು ಎಂಬಲ್ಲಿ ಮಂಗಳವಾರ ಮುಸ್ಸಂಜೆ ಅತಿ ವೇಗದಲ್ಲಿ ಟವೇರಾ ಕಾರೊಂದು ರಸ್ತೆಯ ಹೊಂಡವನ್ನೂ ಲೆಕ್ಕಿಸದೆ ಶರವೇಗದಲ್ಲಿ ಸಾಗಿದಾಗ ರಸ್ತೆ ಪಕ್ಕದಲ್ಲಿ ನಿಂತಿದ್ದ ಯುವಕರಿಗೆ ಕೆಸರು ನೀರು ರಾಚಿತು. ಈ ಬಗ್ಗೆ ಸಂಶಯಗೊಂಡ ಯುವಕರ ತಂಡ ಕಾರನ್ನು ಹಿಂಬಾಲಿಸಿದಾಗ ಕಾರು ಕುಬಣೂರು ಬಾಡಿಗೆ ಮನೆಯೊಂದರ ಬಳಿಯಲ್ಲಿ ಪತ್ತೆಯಾಯಿತು. ಕಾರಿನ ಹಿಂದೆ ಮಹಾರಾಷ್ಟ್ರ ಮತ್ತು ಮುಂದೆ ಕನರ್ಾಟಕ ನೋಂದಣಿ ನಂಬ್ರದ ಪ್ಲೇಟ್ಗಳನ್ನು ಹೊಂದಿತ್ತು. ಮನೆಯನ್ನು ಸುತ್ತುವರಿದು ಒಳಗಿದ್ದವರನ್ನು ಸ್ಥಳೀಯರು ಪ್ರಶ್ನಿಸಿ ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ತಂಡವನ್ನು ಬಂಧಿಸಿ ತನಿಖೆ ನಡೆಸಿದಾಗ ದರೋಡೆಕೋರರ ಸಂಚು ಬಯಲಾಯಿತು.

ಜೈಲಿನಲ್ಲಿ ಪರಸ್ಪರ ಪರಿಚಯವಾಗಿದ್ದ ಆರೋಪಿಗಳಲ್ಲಿ ಅಬ್ದುಲ್ಅಜೀಜ್ ಶೇಕ್ ತಂಡದ ಸೂತ್ರಧಾರನಾಗಿದ್ದು ಬಾಡಿಗೆ ಮನೆಯನ್ನು ಈತ ವ್ಯವಸ್ಥೆಗೊಳಿಸಿದ್ದನು. ತಂಡದಲ್ಲಿ ಮಹಾರಾಷ್ಟ್ರದ ರಾಜ ಎಂಬಾತನೂ ಒಳಪಟ್ಟಿದ್ದು ಈತ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಕಾಯರ್ಾಚರಣೆಯಲ್ಲಿ ಕಾಸರಗೋಡು ಡಿವೈಎಸ್ಪಿ ಟಿ.ಪಿ. ರಂಜಿತ್, ಕುಂಬಳೆ ಸಿ.ಐ. ಸುರೇಶ್ ಬಾಬು, ಇಂಟೆಲಿಜೆನ್ಸ್ ಸಿಐ ಸಿ.ಬಿ.ಥೋಮಸ್, ಕುಂಬಳೆ ಎಸ್ಐ ಕೆ.ವಿ. ಗಂಗಾಧರನ್ ಹಾಗೂ ಸಿಬ್ಬಂಧಿಗಳಿದ್ದರು.

gii

 

By Suddi9

Leave a Reply

Your email address will not be published. Required fields are marked *