ಮೂಡುಬಿದಿರೆ: ಪುತ್ತಿಗೆ ಗ್ರಾಮದ ಸಬ್ ಸ್ಟೇಷನ್ ಬಳಿಯ ಶೇಕ್ ಮುಬೀನ್ ಮತ್ತು ಸಲ್ಮಾ ಬಾನು ಅವರ 8 ವರ್ಷದ ಮಗು ಮಹಮ್ಮದ್ ಸರೋಶ್ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು , ಅದರ ಚಿಕಿತ್ಸೆಯ ನಂತರ ಮಗುವಿನ ದೈಹಿಕ ಬೆಳವಣಿಗೆ ಕುಂಠಿತವಾಗಿದ್ದು, ಮಗುವಿನ ಮುಂದಿನ ಬೆಳವಣಿಗೆಗೆ 12 ತಿಂಗಳ ಕಾಲ 15,000 ರೂಪಾಯಿ ಮೌಲ್ಯದ ಇಂಜೆಕ್ಷನ್ ನೀಡುವಂತೆ ವೈದ್ಯರು ಸೂಚಿಸಿದ್ದು ಬಡಕುಟುಂಬ ಬಹಳಷ್ಟು ಸಂಕಷ್ಟಕ್ಕೀಡಾಗಿತ್ತು.1248b5e7-1672-459d-900a-a808e4a2717e

ಇದನ್ನು ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರ ಗಮನಕ್ಕೆ ಸ್ಥಳೀಯ ನಾಯಕರು ತಂದಿದ್ದು ಅವರು ಆ ಮಗುವಿಗೆ 15,000 ಮೌಲ್ಯದ ಇಂಜೆಕ್ಷನ್ ಆ ಮಗುವಿನ ಮನೆಗೆ ತಂದುಕೊಟ್ಟಿದ್ದು ಮಗುವಿನ ಮುಂದಿನ ಚಿಕಿತ್ಸೆಗೆ ನೆರವಾಗುವ ಭರವಸೆಯನ್ನು ನೀಡಿ ಮಗುವಿನ ಪೋಷಕರಿಗೆ ಧೈರ್ಯ ತುಂಬಿದ್ದಾರೆ.

ಮಾಜಿ ಸಚಿವ ಅಭಯಚಂದ್ರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಯೂತ್ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಮಾಜಿ‌ಅಧ್ಯಕ್ಷ ಚಂದ್ರಹಾಸ ಸನಿಲ್, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಪಕ್ಷದ ಮುಖಂಡರುಗಳಾದ ವಾಸುದೇವ ನಾಯಕ್, ರಾಜೇಶ್ ಕಡಲಕೆರೆ ನಿತಿನ್ ಬೆಳುವಾಯಿ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *