ಮುಂಬಯಿ : ಮಂಗಳೂರು ಮೂಡಬಿದ್ರೆ ತಾಲೂಕು ಕಿನ್ನಿಗೋಳಿ ಇಲ್ಲಿನ ಹೆಸರಾಂತ ತಜ್ಞ ಡಾ| ಕ್ಲೆಮೆಂಟ್ ತೋಮಸ್ ಕುಟಿನ್ಹೋ (೮೦.) ಎ.೨೪ ರಂದು ಶನಿವಾರ  ಕಿನ್ನಿಗೋಳಿ  ಗೋಲಿಜೊರ ರಸ್ತೆಯಲ್ಲಿನ ತನ್ನ ಸ್ವನಿವಾಸ ಫ್ಲಾವಿಯಾ ವಿಲ್ಲಾದಲ್ಲಿ ನಿಧನರಾದರು.Dr. Clement Thomas Cutinhoಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯ ಬರುವ ಗುರುವಾರ (ಎ.೩೦) ಸಂಜೆ ೩.೩೦ ಗಂಟೆಗೆ ಫ್ಲಾವಿಯಾ ನಿವಾಸದಿಂದ ಹೊರಟು ಬಳಿಕ ಇಮ್ಯಾಕ್ಯುಲೇಟ್ ಕನ್ಸೆಪ್ಶನ್ ಚರ್ಚ್ ಕಿನ್ನಿಗೋಳಿ ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಎಂಬಿಬಿಎಸ್ ವೈದ್ಯಕೀಯ ಸನದು ಪದವೀದರರಾಗಿದ್ದ ಇವರು ಸುಮಾರು ೧೯೭೦ ಇಸವಿಯಲ್ಲಿ ಡಾ| ಕ್ಲೆಮೆಂಟ್ ಕುಟಿನ್ಹೋ ಇವರು ಮುಂಡ್ಕೂರು, ಕಿನ್ನಿಗೋಳಿ ದಾಮಸ್‌ಕಟ್ಟೆ, ಪೊಂಪೈ, ಬಳ್ಕುಂಜೆ, ಪಕ್ಷಿಕೆರೆ, ನೀರುಡೆ, ಪರಿಸರದಲ್ಲಿ ತಮ್ಮ ಸ್ವದವಾಖನೆಗಳನ್ನು ಸ್ಥಾಪಿಸಿ ದೀನದಲಿತರಿಗೆ, ಬಡವರಿಗೆ ಧರ್ಮಾರ್ಥ ಚಿಕಿತ್ಸೆ ನೀಡಿ ಉಪಚರಿಸುತ್ತಿದ್ದರು. ಅಲ್ಲದೆ ಇತರ ಅಸ್ವಸ್ಥರಿಗೆ ಬಾರೀ ಕಡಿಮೆ ದರದಲ್ಲಿ ಉಪಚರಿಸುತ್ತ್ತಿದ್ದರು. ಪ್ರಮುಖ ರೋಗಿಗಳ ಇಲಾಜುಗಾಗಿ ಹಗಲಿರುಳು ಚಳಿ,ಮಳೆ ಬಿಸಿಲೆನ್ನದೆ ಎನ್ನದೆ ತನ್ನ ಸ್ವಂತಃ ಕಾರಿನಲ್ಲಿ ದೂರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಮಾಡಿಸುವಲ್ಲಿ ಶ್ರಮಿಸಿದ್ದರು. ಸಾವಿರಾರು ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಿ ನಾಡಿನ ಹೆಸರಾಂತ ವೈದ್ಯರಾಗಿ ಬಡವರ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದರು. ಸುಮಾರು ಐದುವರೆ ದಶಕಗಳ ಅದ್ವೈತ ವೈದ್ಯಕೀಯ ಸೇವೆಗೈದು ಜನಾನುರೆಣಿಸಿದ್ದ ಅಪರೂಪದ ಜನಸೇವಕರಾಗಿದ್ದ ಇವರ ಸೇವೆಯನ್ನು ಪರಿಗಣಿಸಿ ಅನೇಕ ಸಂಘ-ಸAಸ್ಥೆಗಳು ಸನ್ಮಾನಿಸಿ ಗೌರವಿಸಿರುವರು.

By Suddi9

Leave a Reply

Your email address will not be published. Required fields are marked *