ಮುಂಬಯಿ: ಮಲಾಡ್ ಪಶ್ಚಿಮದ ಮಾರ್ವೇ ರಸ್ತೆಯಲ್ಲಿನ ಚೌಕ್ಸಿ ಆಸ್ಪತ್ರೆಯಲ್ಲಿ ಇಂದಿಲ್ಲಿ ಎ.೧೬ ರಂದು ಶುಕ್ರವಾರ ಕೋವಿಡ್ ಲಸಿಕೆ ಕೇಂದ್ರವನ್ನು ಆರಂಭಿಸಲಾಯಿತು. ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಉದ್ಘಾಟಿಸಿದರು.Goapl Shetty Chouksi Hospital A1

ಕೊರೊನಾ ವೈರಸ್ ಕಾಯಿಲೆ (ಕೋವಿಡ್-೧೯)ಗೆ ಕಾರಣವಾಗುವ ಸಾರ್ಸ್ಕೋವ್-೨ ಸೋಂಕಿನಿಂದ ಜನರನ್ನು ರಕ್ಷಿಸುವಲ್ಲಿ ಕೋವಿಡ್ ಲಸಿಕೆ ಅತ್ಯವಶ್ಯವಾಗಿದೆ. ಈ ಬಗ್ಗೆ ಅನುಮಾನ ಪಡಬೇಕಾಗಿಲ್ಲ. ಕೋವಿಡ್ ಲಸಿಕೆ ಸೋಂಕಿನಿಂದ ರಕ್ಷಿಸುವ ಅಗತ್ಯ ಕ್ರಮಗಳಲ್ಲಿ ಒಂದಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರೀಕನೂ ಲಸಿಕೆಯ ಫಲಾನುಭವ ಪಡೆದು ಆರೋಗ್ಯವಂತನಾಗಬೇಕು. ಪ್ರತಿಯೊಬ್ಬ ನಾಗರೀಕನ ಸ್ವಸ್ಥತೆಯೇ ಸಮಾಜ, ರಾಷ್ಟçದ ಸ್ವಾಸ್ಥ್ಯ ಎಂದು ಗೋಪಾಲ್ ಶೆಟ್ಟಿ ತಿಳಿಸಿದರು.Goapl Shetty Chouksi Hospital A2ಪರಸ್ಪರ ಸೇರುವಲ್ಲಿ ಅಪಾಯ ತನ್ನಷ್ಟಕ್ಕೆ ಅವಲಂಬಿಸಿರುತ್ತದೆ ಇವೆಲ್ಲವೂಗಳಿಂದ ಸುರಕ್ಷಿತರಾಗಲು ಮಾಸ್ಕ್ ಧರಿಸುವುದು ಅತೀ ಅಗತ್ಯವಾಗಿದೆ. ಆದ್ದರಿಂದ ಜನರು ತಮ ಸುರಕ್ಷಿತ ಅಭ್ಯಾಸಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಸೂಕ್ತ ಸಂಯೋಜನೆಗಳೊಂದಿಗೆ ಬಳಸಿಕೊಂಡು ಸಮಾಜದ ಸಂಪೂರ್ಣ ಕಾಳಜಿ ವಹಿಸಬೇಕು. ಸೋಂಕು ತಡೆಗಟ್ಟುವಿಕೆ ಮತ್ತು ರೋಗ ನಿಯಂತ್ರಣದ ಬಗ್ಗೆ ಸ್ವತಃ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಸರಕಾರದ ಕಾನೂನು ಪಾಲನಾ ಅನುಸರಣೆ ಎಲ್ಲರ ಜವಾಬ್ದಾರಿ ಆಗಲಿ ಎಂದೂ ಸಂಸದ ಶೆಟ್ಟಿ ಜನರಿಗೆ ಮನವರಿಸಿದರು.

Goapl Shetty Chouksi Hospital A3ಸ್ಥಾನೀಯ ನಗರ ಸೇವಿಕಾ ಯೋಗಿತಾ ಸುನಿಲ್ ಕೋಲಿ ಮುಂದಾಳುತ್ವದಲ್ಲಿ ಆರಂಭಿಸಲ್ಪಟ್ಟ ಲಸಿಕೆ ಕೇಂದ್ರದ ಕಾರ್ಯಕ್ರಮದಲ್ಲಿ ಮುಂಬಯಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಣೇಶ್ ಖಂಕರ್, ಕಾರ್ಯದರ್ಶಿ ವಿನೋದ್ ಶ್ಹೆಲಾರ್, ಬಿಜೆಪಿ ಧುರೀಣರಾದ ದೀಪಕ ಜೋಶಿ, ನರೇಂದ್ರ ರಾಥೋಡ್ ಮತ್ತು ಮಂಡಲ್ ವಾರ್ಡ್ ನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

Goapl Shetty Chouksi Hospital A4

Goapl Shetty Chouksi Hospital A6

By Suddi9

Leave a Reply

Your email address will not be published. Required fields are marked *