ಮೂಡುಬಿದಿರೆ: ಹಾಗೂ ಬಜಪೆ ಪರಿಸರದಲ್ಲಿ ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಡಪದವಿನ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಶರು ಬುಧವಾರ ಬಂಧಿಸಿ ಸುಮಾರು 4.60 ;ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಎಡಪದವು ಪಾಡಿಯಾರು ದಖರ್ಾಸು ಮನೆಯ ಚಿದಾನಂದ ಗೌಡ(26), ಎಡಪದವು ತರೋಳಿಕಾಡು ನಿವಾಸಿ ರಜನೀಶ(20) ಮತ್ತು ಎಡಪದವು ಗ್ಯಾರೇಜಿನ ವೆಲ್ಡರ್ ಮೂಲತ ಮಡಿಕೇರಿಯವನಾಗಿರುವ ಮಿಥುನ್(24) ಬಂಧಿತ ಆರೋಪಿಗಳು. ಆರೋಪಿಗಳಿಂದ ಮೂರು ಬೈಕ್, ಚಿನ್ನಾಭರಣ, ಟಿ.ವಿ, ಡಿ.ವಿ.ಡಿ ಪ್ಲೇಯರ್ ಇನ್ನಿತರ ಇಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 4.60 ಲಕ್ಷ ರೂ ಎಂದು ಅಂದಾಜಿಸಲಾಗಿದೆ.


20013ರ ಜುಲೈನಲ್ಲಿ ರಾತ್ರಿ ಕಲ್ಲಮುಂಡ್ಕೂರಿನ ಒಳರಸ್ತೆಯಲ್ಲಿ ರಾತ್ರಿ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಚಾಕು ತೋರಿಸಿ ಗುಂಡ್ಯಡ್ಕದ ಬೀನಾ ಮಿಸ್ಕಿತ್ ಎಂಬ ಯುವತಿಯ ಚಿನ್ನದ ಸರ ಮತ್ತು ಉಂಗುರ ಕಸಿದು ಪರಾರಿಯಾಗಿದ್ದರು. ಮೇಲ್ಕಾಣಿಸಿದ ಮೂವರು ಆರೋಪಿಗಳು ಬೈಕ್ನಲ್ಲಿ ಬಂದು ಈ ಕೃತ್ಯ ನಡೆಸಿದ್ದರು.
2013 ಡಿಸೆಂಬರ್ನಲ್ಲಿ ವಿಶ್ವನುಡಿಸಿರಿ ವೇಳೆ ರಾತ್ರಿ ವಿದ್ಯಾಗಿರಿ ಆವರಣದಲ್ಲಿ ನಿಲ್ಲಿಸಿದ್ದ ಬಂಟ್ವಾಳ ಮುಡಾಯಿಕೋಡಿ ಮೂಸಾ ಫಯಾಸ್ ಎಂಬವರ ಬೈಕನ್ನು ಚಿದಾನಂದ ಮತ್ತು ಮಿಥುನ್ ಕಳ್ಳತನ ಮಾಡಿದ್ದರು.
ಕಳೆದ ಜುಲೈ 31ರಂದು ಗಂಜಿಮಠದಲ್ಲಿ ರೊನಾಲ್ಡ್ ಗಾಡ್ವಿನ್ ಪೆನರ್ಾಂಡೀಸ್ ಅವರ ಮನೆಗೆ ನುಗ್ಗಿ ಚಿನ್ನಾಭರಣ, ಡಿವಿಡಿ ಪ್ಲೇಯರ್ ಹಾಗೂ ನಗದು ಸೇರಿದಂತೆ ಸುಮಾರು 1 ಲಕ್ಷ ಮೌಲ್ಯದ ಸೊತ್ತುಗಳ ಕಳ್ಳತನ ಹಾಗೂ ಸೆಪ್ಟಂಬರ್ 5ರಂದು ಮುಚ್ಚುರು ಕೊಂಪದವು ಸೀಮಾ ಪೆನರ್ಾಂಡೀಸ್ ಅವರ ಮನೆಗೆ ನುಗ್ಗಿ ಟಿ.ವಿ, ಇನ್ನಿತರ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಕಳ್ಳತನ ಹಾಗೂ ಕಳೆದ ಅಕ್ಟೋಬರ್ 10 ರಂದು ಎಡಪದವು ಶಿಬ್ರಿಕೆರೆ ಸುಬ್ರಾಯ ಕಾರಂತರ ಮನೆಯಿಂದ ಟಿ.ವಿ, ಹಿತ್ತಾಳೆ ಚೆಂಬು ಹಾಗೂ 6 ಸಾವಿರ ನಗದು ಕಳ್ಳತನದಲ್ಲಿ ಚಿದಾನಂದ ಮತ್ತು ಮಿಥುನ್ ಆರೋಪಿಗಳಾಗಿದ್ದರು.
ಜೈಲಲ್ಲಿ ಒಂದಾದರು
ಹಣಕಾಸು ವಿಚಾರಕ್ಕೆ ಸಂಬಂಧಿಸಿ 2010ರಂದು ಅಳ್ವಾಸ್ ಸೆಕ್ಯೂರಿಟಿ ಗಾಡರ್್ ದಿವಾಕರ್(48)ಅವರ ಕೊಲೆ ಪ್ರಕರಣದಲ್ಲಿ ಚಿದಾನಂದ ಜೈಲು ಸೇರಿದ್ದರೆ 2011ರಲ್ಲಿ ಪುತ್ತಿಗೆ ಕಡ್ದಬೆಟ್ಟುನಲ್ಲಿ ದಲಿತ ಯುವತಿಯ ಮೈಮೇಲೆ ಕೈಹಾಕಿದ ಪ್ರಕರಣದಲ್ಲಿ ಮಿಥುನ್ ಕಂಬಿ ಎಣಿಸಿದ್ದ. ಜೈಲಿನಲ್ಲಿ ಇವರಿಬ್ಬರು ಪರಿಚಯವಾಗಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರು. ಜೈಲಿನಿಂದ ಹೊರಬಂದ ನಂತರ ಇವರಿಬ್ಬರು ವಿವಿದೆಡೆ ಕಳ್ಳತನ ಶುರುಮಾಡಿದ್ದರು. ಕಲ್ಲಮುಂಡ್ಕೂರಿನಲ್ಲಿ ಯುವತಿಯ ಚೈನ್ ಎಗರಿಸಿದ ಪ್ರಕರಣ ಬಿಟ್ಟರೆ ಉಳಿದ ಕೃತ್ಯಗಳಲ್ಲಿ ರಜನೀಶ್ ಭಾಗಿಯಾಗಿರಲಿಲ್ಲ ಎನ್ನಲಾಗಿದೆ.
ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದರು:
ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಮತ್ತು ಎಸ್.ಐ ರಮೇಶ್ ಕುಮಾರ್ ನೇತ್ರತ್ವದ ಪೊಲೀಸರ ತಂಡ ಬುಧವಾರ ಬೆಳಿಗ್ಗೆ ವಿದ್ಯಾಗಿರಿ ಬಳಿ ವಾಹನ ತಪಾಸಣೆ ವೇಳೆ ಎರಡು ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು ದೂರದಲ್ಲೆ ಪೊಲೀಸರನ್ನು ಕಂಡು ವಾಪಾಸು ಮುಲ್ಕಿ ರಸ್ತೆಯಲ್ಲಿ ವಾಹನ ಓಡಿಸಿದರು. ಅನುಮಾನಗೊಂಡ ಪೊಲೀಸರು ಜೀಪಿನಲ್ಲಿ ಅವರನ್ನು ಬೆನ್ನಟ್ಟಿ ಹಿಡಿದು ಬೈಕ್ಗಳ ದಾಖಲೆ ಪರಿಶೀಲನೆ ಮಾಡಿದಾಗ ಅವು ಕಳ್ಳತನ ಮಾಡಿದ ಬೈಕ್ಗಳೆಂದು ಗೊತ್ತಾಯಿತು. ಆರೋಪಿಗಳು ಈ ಹಿಂದೆ ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಕಾರ್ಕಳಕ್ಕೆ ಹೊರಟಿದ್ದರು ಎನ್ನಲಾಗಿದೆ. ಕೂಡಲೇ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ವಿವಿದೆಡೆ ನಡೆದ ಕಳ್ಳತನ ಪ್ರಕರಣ ಬೆಳಕಿಗೆ ಬಂತ್ತೆನ್ನಲಾಗಿದೆನ್ನಲಾಗಿದೆ.
ಮೂರು ಬೈಕ್ಗಳ ಪೈಕಿ ಒಂದು ಕಳ್ಳತನ ಮಾಡಿದ್ದಾಗಿದ್ದರೆ ಮತ್ತೆರಡು ಚಿದಾನಂದನಿಗೆ ಸೇರಿದ್ದೆನ್ನಲಾಗಿದೆ. ಕಳ್ಳತನದ ಹಣದಲ್ಲಿ ಸುಮಾರು 90 ಸಾವಿರದ ಬೈಕನ್ನು ಚಿದಾನಂದ ಇತ್ತೀಚೆಗೆ ಖರೀದಿಸಿದ್ದ ಎಂದು ತಿಳಿದುಬಂದಿದೆ. ಇದಕ್ಕೆ ನಂಬರ್ ಪ್ಲೇಟ್ ಅಳವಡಿಸಿಲ್ಲ. ಇನ್ನೊಂದು ಬೈಕ್ಗೆ ಎದುರುಗಡೆ ಮಾತ್ರ ನಂಬರ್ ಪ್ಲೇಟ್ ಅಳವಡಿಸಿದ್ದು ಅದು ನಕಲಿ ನಂಬರ್ ಎಂದು ಗೊತ್ತಾಗಿದೆ. ಆರೋಫಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


