ಒಡಿಯೂರು : ಶ್ರೀಗಳ ಜನ್ಮಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಪೂವರಿ ಪತ್ರಿಕಾ ಬಳಗದ ನೇತೃತ್ವದಲ್ಲಿ, ಷಷ್ಠ್ಯಬ್ದ ಪುತ್ತೂರು ತಾಲೂಕು ಸಮಿತಿ ಸಹಯೋಗದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ತುಳುನಾಡಿನ ಇತಿಹಾಸದಲ್ಲಿ ಪ್ರಥಮವಾಗಿ ನಡೆಯುವ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಎ.೨ರಂದು ಬೆಳಗ್ಗೆ ೮.೦೦ ಗಂಟೆಗೆ ತುಳು ಭಜನೆ ಐಸಿರದೊಂದಿಗೆ ಆರಂಭಗೊಂಡು ಉದ್ಘಾಟನಾ ಸಮಾರಂಭ, ವಿಶೇಷ ಸಂಚಿಕೆ ಬಿಡುಗಡೆ, ತುಳು ಪತ್ರಿಕೆ ಪ್ರದರ್ಶನ ಮತ್ತು ಮಾರಾಟ, ವಿಚಾರಗೋಷ್ಠಿ, ನಿನ್ನೆ-ಇಂದು-ನಾಳೆ ತುಳು ಪತ್ರಿಕೆ, ಪೂವರಿ ಸಾಹಿತ್ಯ ಪ್ರಶಸ್ತಿ ಪುರಸ್ಕಾರ, ರಸಪ್ರಶ್ನೆ ಕಾರ್ಯಕ್ರಮ, ನುಡಿ ಚಿತ್ರ ಪ್ರದರ್ಶನ, ಸನ್ಮಾನ-ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಳ್ಳಲಿದೆ.Odiyooru Shree-A

ಬೆಳಗ್ಗೆ ಒಡಿಯೂರು ವಜ್ರಮಾತಾ ಮಹಿಳಾ ಭಜನಾ ಘಟಕ ಪುತ್ತೂರು, ರಂಗದೀಪ ತಂಡ ಪುತ್ತೂರು ಬಳಗದ ತುಳು ಭಜನೆ ಐಸಿರ ಕಾರ್ಯಕ್ರಮವನ್ನು ನ್ಯಾಯವಾದಿಗಳಾದ ಶ್ರೀ ಮಹಕಜೆ ದಂಪತಿಗಳು ಉದ್ಘಾಟಿಸುವರು.  ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಸಮಿತಿ ಗೌರವಾಧ್ಯಕ್ಷ, ಪುತ್ತೂರು ಶಾಸಕರು ಸಂಜೀವ ಮಠಂದೂರು ಉದ್ಘಾಟಿಸುವರು.Matanandamayi Odiyooru

ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಲಿದ್ದು ಪುತ್ತೂರು ಉಪವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ್ ಸಮ್ಮಿಲನದ ವಿಸೇಸ ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ  ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತುಳು ಪತ್ರಿಕಾ ಪ್ರದರ್ಶನವನ್ನು ಉದ್ಘಾಟಿಸುವರು.

ಪುತ್ತೂರು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಗೌರವ ಉಪಸ್ಥಿತರಿದ್ದು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಆಶಯದ ನುಡಿಯೊಂದಿಗೆ ನಡೆಯಲಿದೆ. ಪತ್ರಿಕಾ ಗೋಷ್ಠಿಯಲ್ಲಿ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನಾ ಸಮಿತಿ ಸಂಚಾಲಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಸಹಸಂಚಾಲಕ ಮಹೇಶ್ ಕೆ.ಸವಣೂರು, ಸದಸ್ಯ ಕಲಾವಿದ ಕೃಷ್ಣಪ್ಪ ಕಲ್ಲೇಗ ಮುಂತಾದವರು ಉಪಸ್ಥಿತರಿದ್ದರು.

 

 

 

By Suddi9

Leave a Reply

Your email address will not be published. Required fields are marked *