ಬಂಟ್ವಾಳ: ಲಯನ್ಸ್ ಕ್ಲಬ್ ಮತ್ತು ಪ್ರಾಂತೀಯ ಸಮ್ಮೇಳನ ಸಮಿತಿ ವತಿಯಿಂದ ಕಂಚಿಕಾರಪೇಟೆಯಲ್ಲಿ ಈಚೆಗೆ ಏರ್ಪಡಿಸಿದ್ದ ‘ಪುನರ್ಜನ್ಮ’ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಯವರ ಚಿನ್ನದ ಪದಕ ಪುರಸ್ಕೃತ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಪ್ರಗತಿಪರ ಕೃಷಿಕ ರಘುನಾಥ ಪಯ್ಯಡೆ ಕುರಿಯಾಳ ಇವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ: ಲಯನ್ಸ್ ‘ಪುನರ್ಜನ್ಮ’ ಪ್ರಾಂತೀಯ ಸಮ್ಮೇಳನ
ಲಯನ್ಸ್ ಸಾಧನೆ ಬ್ಯಾನರ್ ಪ್ರದರ್ಶನ, ಸಾಧಕರಿಗೆ ಸನ್ಮಾನ6btl-Lions

ಬಂಟ್ವಾಳ: ಇಲ್ಲಿನ ಲಯನ್ಸ್ ಕ್ಲಬ್ ಮತ್ತು ಪ್ರಾಂತೀಯ ಸಮ್ಮೇಳನ ಸಮಿತಿ ವತಿಯಿಂದ ಕಂಚಿಕಾರಪೇಟೆಯಲ್ಲಿ ಈಚೆಗೆ ಏರ್ಪಡಿಸಿದ್ದ ‘ಪುನರ್ಜನ್ಮ’ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಯವರ ಚಿನ್ನದ ಪದಕ ಪುರಸ್ಕೃತ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಪ್ರಗತಿಪರ ಕೃಷಿಕ ರಘುನಾಥ ಪಯ್ಯಡೆ ಕುರಿಯಾಳ ಇವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬಿ.ಸಂಜೀವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೂ 11.50ಲಕ್ಷ ವೆಚ್ಚದಲ್ಲಿ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಉಚಿತ ಶೈತ್ಯಾಗಾರ ಕೊಡುಗೆ ನೀಡಲಾಗಿದೆ ಎಂದರು.

ಜಯಂತಿ ಎಸ್.ಶೆಟ್ಟಿ ಸಮ್ಮೇಳನ ಉದ್ಘಾಟಿಸಿದರು. ಇದೇ ವೇಳೆ ಲಯನ್ಸ್ ಕ್ಲಬ್ ಸಾಧನೆ ಮತ್ತು ಸಾಮಾಜಿಕ ಕೊಡುಗೆಗಳ ಬಗ್ಗೆ ಬ್ಯಾನರ್ ಪ್ರದರ್ಶನ ನಡೆಯಿತು.
ನಿವೃತ್ತ ಪ್ರಾಧ್ಯಾಪಕ ಸಾಹಿತಿ ರಾಧಾಕೃಷ್ಣ ಕಲ್ಚಾರು ಮತ್ತು ಮಂಗಳೂರು ಎಜೆ ಆಸ್ಪತ್ರೆ ವೈದ್ಯಕೀಯ ನಿಧರ್ೇಶಕ ಡಾ.ಪ್ರಶಾಂತ ಮಾರ್ಲ, ಲಯನ್ಸ್ ರಾಜ್ಯಪಾಲ ಗೀತಾ ಪ್ರಕಾಶ್, ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಶುಭ ಹಾರೈಸಿದರು.

ಸಮಿತಿ ಗೌರವಾಧ್ಯಕ್ಷ ಡಾ.ಬಿ.ವಸಂತ ಬಾಳಿಗಾ, ಗೌರವ ಸಲಹೆಗಾರ ಕೆ.ದೇವದಾಸ ಭಂಡಾರಿ, ಸಮಿತಿ ಅಧ್ಯಕ್ಷ ಎನ್.ಸತೀಶ ಕುಡ್ವ, ಕಾರ್ಯದಶರ್ಿ ಮಧ್ವರಾಜ್ ಬಿ.ಕಲ್ಮಾಡಿ, ಕೋಶಾಧಿಕಾರಿ ಸುನಿಲ್ ಬಿ., ಸಲಹೆಗಾರ ರಾಧಾಕೃಷ್ಣ ರೈ, ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮತ್ತು ಮನೋರಂಜನ್ ಕೆ.ಆರ್., ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಕೃಷ್ಣ ಶ್ಯಾಂ, ಕಾರ್ಯದಶರ್ಿ ಕೆ.ವೈಕುಂಠ ಕುಡ್ವ, ಕೋಶಾಧಿಕಾರಿ ದಿಶಾ ಆಶೀವರ್ಾದ್, ಸಲಹೆಗಾರ ಆಶಾ ಫೆನರ್ಾಂಡಿಸ್, ರಾಜೇಶ ಶೆಟ್ಟಿ ಶಬರಿ, ದಾಮೋದರ ಬಿ.ಎಂ., ಲಕ್ಷ್ಮಣ ಕುಲಾಲ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *