ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ `ಕಲಶಾಭಿಷೇಕ’ ಪ್ರಯುಕ್ತ ಸೋಮವಾರ ಬೆಳಿಗ್ಗೆ ಪೂಜಾ ವಿಧಿ-ವಿಧಾನಗಳು ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ವೆಂಕಟೇಶ್ ತಂತ್ರಿ ನೆರವೇರಿಸಿದರು.
ದೇವಸ್ಥಾನದ ಅರ್ಚಕ ವೃಂದವು ನವಗ್ರಹ ಹೋಮ, ಪೂರ್ಣಗ್ರಹ ಹೋಮ, ನೂರೆಂಟು ನಾರೀಕೇಳ ಗಣಹೋಮ ನೆರವೇರಿಸಿತು. ದೇವಾಲಯದ ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್, ಮಾಧವ ಮಯ್ಯ, ನಾರಾಯಣ ಭಟ್, ಕೆ. ರಾಮ ಭಟ್, ವಿಷ್ಣುಮೂರ್ತಿ ನಟ್ಟೋಜ ಹಾಗೂ ಅರ್ಚಕ ವೃಂದ ಸಹಕರಿಸಿದರು.

