ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ ೧೩ರಂದು ಶನಿವಾರ ಬೆಳಗ್ಗೆ ೭.೩೦ರಿಂದ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಪೂಜಾವಿಧಿ ವಿಧನಗಳು ಪೊಳಲಿಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.
ವೆಂಕಟೇಶ್ ತಂತ್ರಿ, ದೇವಳದ ಅರ್ಚಕ ,ಪವಿತ್ರಪಾಣಿ ಮಾಧವ ಭಟ್, ಅರ್ಚಕರಾದ ನಾರಾಯಣ ಭಟ್, ಕೆ. ರಾಮ್ ಭಟ್, ಪರಮೇಶ್ವರ ಭಟ್ ,ಮಾಧವ ಮಯ್ಯ ಪೂಜೆಯಲ್ಲಿ ಪ್ರಾಥನೆ, ಪುಣ್ಯಾಹನಾಂದಿ,ಕಂಕಣ ಬಂಧ , ಪ್ರಾಯಶ್ಚಿತ್ತ,ಪವಮಾನ ಹೋಮ, ಅಥರ್ವಶೀರ್ಷ ಹವನ, ಪ್ರಸನ್ನ ಪೂಜೆ ನೆರವೇರಿತು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ , ಮೊಕ್ತೇಸರರಾದ ಯು. ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ,ಉಳಿಪಾಡಿ ಗುತ್ತು ಅರುಣ್ ಆಳ್ವ ,ಕ್ರಷ್ಣ ರಾಜ್ ಮಾರ್ಲ,ಕ್ರಷ್ಣ ಕುಮಾರ್ ಪೂಂಜ ಮತ್ತಿತರರು ಇದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.




