ಮಂಗಳೂರು: ನಮ್ಮ ಗ್ರಾಮವನ್ನು ಸ್ವಚ್ಚ ಸುಂದರವಾಗಿಸಲು ಗ್ರಾಮದ ಸ್ವಚ್ಚ ಸಂಕೀರ್ಣ ಘಟಕ ಕ್ಕೆ ಹಸಿ ಹಾಗೂ ಒಣ ಕಸವನ್ನು ವೈಜ್ಞಾನಿಕ ವಿಲೇವಾರಿ ಮಾಡುವ ವಿಂಗಡಿಸಿ ನೀಡುವ ಮೂಲಕ ಸಹಕರಿಸಿ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಆಂದೋಲನ ವನ್ನು ಯಶಸ್ವಿ ಗೊಳೊಸಬೇಕೆಂದು ಸ್ವಚ್ಚ ಭಾರತ್ ಗ್ರಾಮೀಣ ಇದರ ಜಿಲ್ಲಾ ನೆರವು ಘಟಕದ ಮಾಹಿತಿ, ಶಿಕ್ಷಣ ಹಾಗೂ ಸಂವಹನ ವಿಭಾಗದ ಜಿಲ್ಲಾ ಸಂಯೋಜಕ ಡೊಂಬಯ್ಯ ಇಡ್ಕಿದು ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕು ಪಂಚಾಯತ್ ನಲ್ಲಿ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಆಂದೋಲನದ ಪ್ರಯುಕ್ತ ಆಟೋ ಪ್ರಚಾರಕ್ಕೆ ಚಾಲನೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
.ತಾ.ಪಂ ಉಪಾಧ್ಯಕ್ಷರು ಪೋಸ್ಟರ್ ಬಿಡುಗಡೆಗೊಳಿಸಿದರು. ಸ್ವಚ್ಚತಾ ಪ್ರತಿಜ್ಞೆ ಕೈ ಗೊಳ್ಳಲಾಯಿತು. ಪುತ್ತಿಗೆ ಗ್ರಾಮದ ವ್ಯಾಪ್ತಿಯಲ್ಲಿ ಬೀದಿನಾಟಕ, ತೆಂಕಮಿಜಾರು ಗ್ರಾಮ ಶಾಲಾ ಮಕ್ಕಳಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
