ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆಯಲ್ಲಿ ಮೂಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನೂತನವಾಗಿ ಫಲ್ಗುಣಿ ರೋಟರಿ ಕ್ಲಬ್ ಅಸ್ತಿತ್ವಗೊಂಡಿದ್ದು, ಇದೇ ೮ರಂದು ಸಂಜೆ ೭ ಗಂಟೆಗೆ ಕ್ಲಬ್ಬಿನ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಎಂ.ರಂಗನಾಥ್ ಭಟ್ ಉದ್ಘಾಟಿಸಲಿದ್ದು, ಸಹಾಯಕ ಗವರ್ನರ್ ಯತಿಕುಮಾರ ಸ್ವಾಮಿ ಗೌಡ, ವಲಯ ಸಂಚಾಲಕ ಬಲರಾಮ್ ಕೆ.ಎಸ್. ಮತ್ತಿತರ ಗಣ್ಯರು ಭಾಗವಹಿಸುವರು ಎಂದು ನಿಯೋಜಿತ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *