ಮಂಗಳೂರು: ಚಚರ್್ದಾಳಿಗೆ ಸಂಬಂಧಿಸಿ ತನಿಖೆ ನಡೆಸಿ ಸೋಮಶೇಖರ್ ಆಯೋಗ ಸಲ್ಲಿಸಿದ ವರದಿಯನ್ನು ರಾಜಕೀಯ ಕಾರಣಗಳಿಗೋಸ್ಕರ ಕಾಂಗ್ರೆಸ್ ಸರಕಾರ ತಿರಸ್ಕರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೂರಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಇದನ್ನು ರಾಜಕೀಯಗೊಳಿಸಲು ಹೊರಟಂತಿದೆ. ಬಿಜೆಪಿ ಸರಕಾರದ ಯಾವುದೇ ಉತ್ತಮ ಯೋಜನೆ, ಕೆಲಸಗಳಿದ್ದರೂ ಅದನ್ನು ಕೈ ಬಿಡುವ ಕೆಲಸವನ್ನು ಮಾತ್ರ ಕಾಂಗ್ರೆಸ್ ಮಾಡುತ್ತಿದೆ. ಇದರ ಇನ್ನೊಂದು ಮುಖವಾಗಿ ಆಯೋಗದ ವರದಿಯನ್ನು ಕೈಬಿಡಲಾಗಿದೆ ಎಂದರು.
ಹಿಂದೂ ಸಂಘಟನೆಯ ಅಮಾಯಕನ ಮೇಲೆ ಮಂಗಳೂರಿನಲ್ಲಿ ಗೂಂಡಾ ಪ್ರವೃತ್ತಿ ನಡೆಸಲಾಗಿದೆ. ಕಾವೂರು ಠಾಣೆಯ ಪೊಲೀಸ್ ಅಧಿಕಾರಿಯ ವರ್ತನೆ ಸಹ್ಯವಲ್ಲ. ತತ್ಕ್ಷಣವೇ ಆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ನಿಂದ ರಾಜಕೀಯ ಲಾಭದ ಲೆಕ್ಕಾಚಾರ: ಸುರೇಶ್ ಕುಮಾರ್
ಚಚರ್್ದಾಳಿ ನಡೆದ ಸಂದರ್ಭದಲ್ಲಿ ಬಿಜೆಪಿ ಸರಕಾರ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಂಡಿತ್ತು. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಸೋಮಶೇಖರ್ ಆಯೋಗವನ್ನೇ ನೇಮಕ ಮಾಡಲಾಗಿತ್ತು. ಆದರೆ, ಈಗ ಕಾಂಗ್ರೆಸ್ ಸರಕಾರ ರಾಜಕೀಯ ಲಾಭದ ಲೆಕ್ಕಾಚಾರ ಹಾಕಿಕೊಂಡು ವರದಿ ತಿರಸ್ಕಾರಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸುರೇಶ್ ಕುಮಾರ್ ಹೇಳಿದರು.
