ಮೂಡುಬಿದರೆ : ತನ್ನ ಸ್ನೇಹಿತೆಯ ಹುಟ್ಟು ಹಬ್ಬವೆಂದು ಹೇಳಿ ಮನೆಯಿಂದ ಹೊರಟು ಹೋಗಿರುವ ಯುವತಿಯೊಬ್ಬಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದರ ಬಗ್ಗೆ ಯುವತಿಯ ಹೆತ್ತವರು ಮೂಡುಬಿದರೆ ಠಾಣೆಗೆ ದೂರು ನೀಡಿದ್ದಾರೆ.
ಮೂಡುಬಿದರೆ ಸಮೀಪದತೋಡಾರಿನ ದಿ.ಸುರೇಶ್ ಎಂಬವರ ಪುತ್ರಿ ರೂಪಾಶ್ರೀ (24ವ) ನಾಪತ್ತೆಯಾಗಿರುವ ಯುವತಿ. ಈಕೆ ಅ.13ರಂದು ತನ್ನ ಸ್ನೇಹಿತೆಯ ಹುಟ್ಟು ಹಬ್ಬಕ್ಕೆಂದು ಹೋಗಿದ್ದಳು. ಆದರೆ ನಂತರ ಮನೆಗೆ ಬಾರದಾಗ ಸಂಶಯಗೊಂಡು ಮನೆಯಲ್ಲಿ ಹುಡುಕಾಡಿದಾಗ` ತಾನು ನಾಲ್ಕು ವರ್ಷದಿಂದ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು ಆತನನ್ನು ತಾನು ರಿಜಿಸ್ಟರ್ ಮ್ಯಾರೇಜ್ ಆಗುತ್ತೇನೆ” ಎಂದು ಬರೆದಿರುವ ಪತ್ರ ಸಿಕ್ಕಿರುತ್ತದೆ.
ಗೋದಿ ಮೈ ಬಣ್ಣ ಹೊಂದಿರುವ ರೂಪಾಶ್ರೀ 4 ಅಡಿ 8 ಇಂಚು ಎತ್ತರ, ಸಾಧಾರಣ ಶರೀರ, ಹಳದಿ ಚೂಡಿದಾರ್ (ಕ್ರೀಮ್ ಪ್ಯಾಂಟ್) ಚಿನ್ನದ ಮೂಗುತಿ ಮತ್ತು ಓಲೆ ಧರಿಸಿರುತ್ತಾಳೆ, ದ್ವಿತೀಯ ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ, ಮನೆಯಲ್ಲಿಯೇ ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡಿದ್ದ ಆಕೆ ಕನ್ನಡ, ತುಳು ಭಾಷೆ ಬಲ್ಲವಳಾಗಿದ್ದಾಳೆ.
ತನ್ನ ಪುತ್ರಿ ರೋಹಿತ್ ಶೆಟ್ಟಿಯನ್ನು ಪ್ರೀತಿಸಿ ವಿವಾಹವಾಗಿರಬಹುದು ಎಂದು ರೂಪಾಶ್ರೀಯ ತಾಯಿ ಸುಜಾತ ಸಂದೇಹ ವ್ಯಕ್ತಪಡಿಸಿದ್ದು ತನ್ನ ಮಗಳನ್ನು ಹುಡುಕಿಕೊಡುವಂತೆ ಪೊಲೀಸರಲ್ಲಿ ವಿನಂತಿಸಿದ್ದಾರೆ.
ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ದೂರವಾಣಿ ಸಂಖ್ಯೆ : ಪೊಲೀಸ್ ಆಯುಕ್ತರು, 0824-2220801, 2220800 ಮತ್ತು ಮೂಡುಬಿದರೆ ಠಾಣೆ (08258-236333) ಸಂಪಕರ್ಿಸಬಹುದಾಗಿದೆ.
